ನವದೆಹಲಿ:ಮಾ-8: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಅತ್ಯಂತ ಅಗ್ಗದ ಮತ್ತು ಗುಣಮಟ್ಟದ ಶೇ.100ರಷ್ಟು ಬಯೋ ಡಿಗ್ರೇಬಲ್ ಸ್ಯಾನಿಟರ್ ನ್ಯಾಪ್ಕಿನ್ ಗಳನ್ನು ಬಿಡುಗಡೆ ಮಾಡಿದೆ.
ದೆಹಲಿಯಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರು ‘ಸುವಿಧಾ’ ಎಂಬ ಶೇ.100ರಷ್ಟು ಬಯೋ ಡಿಗ್ರೇಬಲ್ ಸ್ಯಾನಿಟರ್ ನ್ಯಾಪ್ಕಿನ್ ಅನ್ನು ಬಿಡುಗಡೆ ಮಾಡಿದರು.
ಸುವಿಧಾ ನ್ಯಾಪ್ಕಿನ್ ಗಳು ಸಂಪೂರ್ಣ ಆರ್ಗ್ಯಾನಿಕ್ ಪ್ಯಾಡ್ ಗಳಾಗಿದ್ದು, ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಕಾರ್ಯಕ್ರಮದಡಿಯಲ್ಲಿ ಕೇಂದ್ರ ಸರ್ಕಾರ ಈ ವಿಶೇಷ ನ್ಯಾಪ್ಕಿನ್ ಗಳನ್ನು ಬಿಡುಗಡೆ ಮಾಡಿದೆ.
ಕೇಂದ್ರ ಸರ್ಕಾರವು ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ನೆರವು ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಜನೌಷಧಿ ಕೇಂದ್ರಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಮಾರಾಟ ವ್ಯವಸ್ಥೆ ಮಾಡಿದೆ. ಇದರ ಬೆಲೆ ಪ್ರತೀ ನ್ಯಾಪ್ಕಿನ್ ಗೆ ಕೇವಲ 2.50 ರೂ ಗಳಾಗಿದ್ದು, ಜನೌಷಧಿ ಕೇಂದ್ರಗಳಲ್ಲಿ ಮಾರಾಟ ಮಾಡಲಾಗುತ್ತದೆ.