ಮುದ್ದೇಬಿಹಾಳ, ಮಾ.7-ಬಾಲಕಿ ಮೇಲಿನ ಅತ್ಯಾಚಾರ ಯತ್ನ ಪ್ರಕರಣವನ್ನು ಖಂಡಿಸಿ ಇಂದು ಸ್ಥಳೀಯ ನಿವಾಸಿಗಳು ಮುದ್ದೇಬಿಹಾಳ ಪಟ್ಟಣದಲ್ಲಿ ಬಂದ್ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಿನ್ನೆ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಯ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದು, ಇಂದು ಕೆಲ ಸಂಘಟನೆಗಳು ಬಂದ್ಗೆ ಕರೆ ನೀಡಿ ಬೆಂಬಲ ನೀಡುವಂತೆ ವ್ಯಾಪಾರಸ್ಥರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದರು.
ಈ ವೇಳೆ ಪೆÇಲೀಸರು ಸ್ಥಳಕ್ಕಾಗಮಿಸಿ ಬಲವಂತವಾಗಿ ಬಂದ್ ಮಾಡುತ್ತಿದ್ದೀರ ಎಂದು ಪ್ರತಿಭಟನಾಕಾರರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.
ಪ್ರತಿಭಟನಾಕಾರರಾದ ಸಂಜಯ್ಕುಮಾರ ಬಾಗೇವಾಡಿ, ರವೀಂದ್ರ ಬಿರಾದಾರ್, ಸಂಗಮ ದೇವನಹಳ್ಳಿ, ಮಾರುತಿ, ಸೇರಿದಂತೆ ಏಳು ಮಂದಿಯನ್ನು ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.