ನವದೆಹಲಿ,ಮಾ.7-ಬೆಂಬಲ ಬೆಲೆ ನೀಡಿ ತೊಗರಿ ಬೇಳೆಯ ಖರೀದಿಗೆ ಹಾಕಲಾಗಿದ್ದ ಮಿತಿಯನ್ನು ಕೇಂದ್ರಸರ್ಕಾರ ವಿಸ್ತರಿಸಿದೆ. ಇದರಿಂದ ರಾಜ್ಯದ ಬೆಳೆಗಾರರಿಗೆ ಅನುಕೂಲವಾಗಿದೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ನವದೆಹಲಿ ಕೃಷಿ ಭವನದಲ್ಲಿ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಈ ಸಂಬಂಧ ಮನವಿ ಮಾಡಿದ್ದರು. ಅಲ್ಲದೆ ಸಂಸದೀಯ ವ್ಯವಹಾರಗಳ ಸಚಿವ ಅನಂತ್ಕುಮಾರ್ ಅವರು ಕೂಡ ಈ ಬಗ್ಗೆ ಪ್ರಸ್ತಾಪಿಸಿದ್ದರು.
ಡಿ.12ರಂದು 90 ದಿನಗಳ ಕಾಲ 1,65,000 ಮೆಟ್ರಿಕ್ ಟನ್ ತೊಗರಿ ಖರೀದಿಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಬಳಿಕ ರಾಜ್ಯದ ಮನವಿಯ ಮೇರೆಗೆ ಮತ್ತೆ 2,65,200 ಮೆಟ್ರಿಕ್ ಟನ್ ತೊಗರಿ ಖರೀದಿಸಲು ಒಪ್ಪಿಗೆ ನೀಡಿತ್ತು. ಇದೀಗ ಪುನಃ ಹೆಚ್ಚುವರಿಯಾಗಿ ಬೆಂಬಲ ಬೆಲೆ ನೀಡಿ ತೊಗರಿ ಖರೀದಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. 3,64,600 ಮೆಟ್ರಿಕ್ ಟನ್ ತೊಗರಿ ಖರೀದಿಗೆ ಇದೀಗ ಕೇಂದ್ರ ಒಪ್ಪಿಕೊಂಡಂತಾಗಿದೆ.