ನವದೆಹಲಿ, ಮಾ.7- ಪ್ರಧಾನಿ ನರೇಂದ್ರಮೋದಿಯವರಿಗೆ ಅವಮಾನ ತೋರಿದ ಹಿನ್ನೆಲೆಯಲ್ಲಿ ಸಂಜೀವ್‍ಕುಮಾರ್ ಎಂಬ ಬಿಎಸ್‍ಎಫ್ ಯೋಧನ ಒಂದು ವಾರದ ವೇತನಕ್ಕೆ ಕತ್ತರಿ ಹಾಕಲಿದೆ.
ಫೆಬ್ರುವರಿ 21 ರಂದು ಪಶ್ಚಿಮ ಬಂಗಾಳದ ನಾಡಿದಾದ ಪ್ರದೇಶದ ಮಾತ್ಪುರ್‍ನ ಬಿಎಸ್‍ಎಫ್‍ನ 15 ಬೆಟೆಲಿಯನ್‍ನ ಹೆಡ್ ಕ್ವಾಟರ್ಸ್‍ನಲ್ಲಿ ಪೆರೇಡ್ ಹಾಗೂ ಸೈನ್ಯದ ದೈನಿಕ ಕಸರತ್ತು ನಡೆಸುವ ವೇಳೆ ಪ್ರಧಾನಿ ಮೋದಿಯವರ ಕಾರ್ಯಕ್ರಮದ ವಿವರ ನೀಡುವಾಗ ಸಂಜೀವ್ ಕುಮಾರ್ ತಪ್ಪೆಸಗಿದ್ದಾನೆ.
ಕಾರ್ಯಕ್ರಮದ ವಿವರ ನೀಡುವಾಗ ಶ್ರೀ ಅಥವಾ ಮಾನ್ಯ ಎಂಬ ಪದಗಳ ಬಳಕೆ ಮಾಡದೆ ಮೋದಿಯವರ ಕಾರ್ಯಕ್ರಮ ಎಂದು ಹೇಳಿದ್ದಾರೆ. ಇದರಿಂದ ಪ್ರಧಾನಿಗೆ ಅಪಮಾನ ಮಾಡಿದ್ದಾನೆ ಎಂದು ಪರಿಗಣಿಸಿದ ಬೆಟೆಲಿಯನ್‍ನ ಹಿರಿಯ ಅಧಿಕಾರಿಗಳು ಸಂಜೀವ್‍ಕುಮಾರ್‍ನ ಒಂದು ವಾರದ ವೇತನಕ್ಕೆ ಕತ್ತರಿ ಹಾಕಿದ್ದಾರೆ.
ಆದರೆ ಈ ಪ್ರಕರಣದ ಬಗ್ಗೆ ಆಗಲಿ, ಸಂಜೀವ್‍ಕುಮಾರ್‍ನ ವೇತನದ ಕಡಿತ ಬಗ್ಗೆ ಬಿಎಸ್‍ಎಫ್‍ನ ನಿರ್ದೇಶಕ ಕೆ.ಕೆ.ಶರ್ಮಾ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.