![Donald Trump](http://kannada.vartamitra.com/wp-content/uploads/2018/02/donald-trump--678x381.jpg)
ವಾಷಿಂಗ್ಟನ್, ಮಾ.7-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರದಲ್ಲಿ ಭಿನ್ನಾಭಿಪ್ರಾಯಗಳಿಗೆ ಉನ್ನತಾಧಿಕಾರಿಗಳು ರಾಜೀನಾಮೆ ನೀಡುತ್ತಿರುವ ಪ್ರಹಸನ ಮುಂದುವರಿದಿದೆ. ಶ್ವೇತಭವನದ ಉನ್ನತ ಆರ್ಥಿಕ ಸಲಹೆಗಾರ ಗ್ಯಾರಿ ಕೋನ್ಹ್ ಇಂದು ತಮ್ಮ ಹುದ್ದೆಗೆ ಗುಡ್ಬೈ ಹೇಳಿದ್ದಾರೆ.
ಟ್ರಂಪ್ ಅವರ ವಾಣಿಜ್ಯ ನೀತಿ(ಉಕ್ಕು ಮತ್ತು ಅಲ್ಯೂಮಿನಿಯಂ ಮೇಲೆ ತೆರಿಗೆ) ವಿಷಯದಲ್ಲಿ ತಲೆದೋರಿದ ಭಿನ್ನಾಭಿಪ್ರಾಯದಿಂದಾಗಿ ಕೋನ್ಹ್ ಆರ್ಥಿಕ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಟ್ರಂಪ್ನ ಪರಮಾಪ್ತೆ ಹಾಗೂ ಮಾಧ್ಯಮ ಸಲಹೆಗಾರ್ತಿ ಹೋಪ್ ಹಿಕ್ಸ್ ಕಳೆದ ವಾರವಷ್ಟೇ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.