ರಿಲಾಯನ್ಸ್ ಉದ್ಯಮಗಳ ಅಧ್ಯಕ್ಷ ಮುಖೇಶ್ ಅಂಬಾನಿ ಸತತ 11ನೇ ವರ್ಷ ಭಾರತದ ಅತ್ಯಂತ ಶ್ರೀಮಂತ

ನ್ಯೂಯಾರ್ಕ್, ಮಾ.7-ರಿಲಾಯನ್ಸ್ ಉದ್ಯಮಗಳ ಅಧ್ಯಕ್ಷ ಮುಖೇಶ್ ಅಂಬಾನಿ ಸತತ 11ನೇ ವರ್ಷ ಭಾರತದ ಅತ್ಯಂತ ಶ್ರೀಮಂತ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ. ಅವರ ಆಸ್ತಿ 40.1 ಶತಕೋಟಿ ಡಾಲರ್ ಅಂದರೆ 2,60,622 ಕೋಟಿ ರೂ.ಗಳು..!
ಫೆÇೀಬ್ರ್ಸ್ ನಿಯತಕಾಲಿಕ ನಿನ್ನೆ ರಾತ್ರಿ ಬಿಡುಗಡೆ ಮಾಡಿರುವ 2018ರ ವಿಶ್ವದ ಕುಬೇರ ಪಟ್ಟಿಯಲ್ಲಿ ಅವರು 19ನೇ ಸ್ಥಾನದಲ್ಲಿದ್ದಾರೆ. ಅವರು 2017ರ ಪಟ್ಟಿಯಲ್ಲಿ 33ನೇ ಸ್ಥಾನದಲ್ಲಿದ್ದರು.  ಈ ವರ್ಷದ ಪಟ್ಟಿಯಲ್ಲಿ ಭಾರತದ 119 ಲಕ್ಷ ಕೋಟ್ಯಾಧಿಪತಿಗಳ ಹೆಸರಿದ್ದು. ಅವರಲ್ಲಿ ಅಂಬಾನಿ ಅಗ್ರಸ್ಥಾನದಲ್ಲಿದ್ದಾರೆ. ಅವರ ಪ್ರಸ್ತುತ ಆಸ್ತಿಯಲ್ಲಿ ಶೇ.72.84ರಷ್ಟು ವೃದ್ದಿ ಕಂಡುಬಂದಿದೆ.
ವಿಪೆÇ್ರೀ ಸಂಸ್ಥೆಯ ಒಡೆಯ ಅಜೀಂ ಪ್ರೇಮ್‍ಜಿ ಫೆÇೀಬ್ರ್ಸ್ ಪಟ್ಟಿಯಲ್ಲಿ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಜಾಗತಿಕ ಕ್ರಮಾಂಕದಲ್ಲಿ 58ನೇ ಸ್ಥಾನ ಗಳಿಸಿದ್ದಾರೆ. ಅವರ ಆಸ್ತಿ 18.8 ಶತಕೋಟಿ. ಮತ್ತೊಬ್ಬ ಖ್ಯಾತ ಉದ್ಯಮಿ ಲಕ್ಷ್ಮಿ ಮಿತ್ತಲ್ (62ನೇ ಸ್ಥಾನ, 18.5 ಶತಕೋಟಿ ಡಾಲರ್), ಶಿವ್ ನಡಾರ್(98ನೇ ಸ್ಥಾನ, 14.6 ಶತಕೋಟಿ ಡಾಲರ್) ಹಾಗೂ ದಿಲೀಪ್ ಸಾಂಘ್ವಿ(115ನೇ ಸ್ಥಾನ, 12.8 ಶತಕೋಟಿ ಡಾಲರ್) ನಂತರದ ಸ್ಥಾನದಲ್ಲಿದ್ದಾರೆ.
ಭಾರತದ 10 ಶ್ರೀಮಂತರ ಪಟ್ಟಿಯಲ್ಲಿ ಕುಮಾರ್ ಬಿರ್ಲಾ, ಉದಯ್ ಕೊಟಕ್, ರಾಧಾಕೃಷ್ಣ ಡಾಮನಿ, ಗೌತಮ್ ಅದಾನಿ, ಮತ್ತು ಸಿಪ್ರಸ್ ಪೂನಾವಾಲಾ ಸ್ಥಾನ ಪಡೆದಿದ್ದಾರೆ.
ಪತಂಜಲಿ ಆಯುರ್ವೇದ ಸಂಸ್ಥೆಯ ಸಹ ಸಂಸ್ಥಾಪಕ ಆಚಾರ್ಯ ಬಾಲಕೃಷ್ಣ ಪಟ್ಟಿಯಲ್ಲಿ 274ನೇ ಸ್ಥಾನ ಗಳಿಸಿದ್ದಾರೆ. ಮುಖೇಶ್ ಅಂಬಾನಿ ಸಹೋದರ ಅನಿಲ್ ಅಂಬಾನಿ 887ನೇ ಕ್ರಮಾಂಕದಲ್ಲಿದ್ದಾರೆ. ಭಾರತದ ಡೈಮಂಡ್ ಕಿಂಗ್ ನೀರವ್ ಮೋದಿ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ