ಮುಂಬೈ, ಮಾ.7-ಲಕ್ಷದ್ವೀಪದ ಬಳಿ ಅರಬ್ಬಿ ಸಮುದ್ರದಲ್ಲಿ ಸರಕು ಸಾಗಣೆ ನೌಕೆಯೊಂದರಲ್ಲಿ ನಿನ್ನೆ ರಾತ್ರಿ ಬೆಂಕಿ ಕಾಣಿಸಿಕೊಂಡು ನಾಲ್ವರು ನಾಪತ್ತೆಯಾಗಿದ್ದಾರೆ. ಈ ಘಟನೆಯಲ್ಲಿ ಇತರ 23 ಜನರನ್ನು ರಕ್ಷಿಸಲಾಗಿದೆ.
330 ಮೀಟರ್ ಉದ್ದದ ಮಯಿಕ್ರ್ಸ್ ಹೊನಮ್ ಹೆಸರಿನ ಈ ನೌಕೆಯು ಸಿಂಗಪುರ್ನಿಂದ ಸುಯೇಜ್ ಮಾರ್ಗವಾಗಿ ತೆರಳುತ್ತಿದ್ದಾಗ ನಿನ್ನೆ ತಡರಾತ್ರಿ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡಿತು. ಸರಕುಸಾಗಣೆಯ ಈ ಹಡಗಿನಲ್ಲಿ 13 ಭಾರತೀಯರೂ ಸೇರಿದಂತೆ 27 ಸಿಬ್ಬಂದಿ ಇದ್ದರು.
ಬೆಂಕಿ ದುರಂತದ ಸುದ್ದಿ ತಿಳಿದ ಕೂಡಲೇ ಕರಾವಳಿ ರಕ್ಷಣಾ ಪಡೆ (ಐಸಿಜಿ) ರಕ್ಷಣಾ ಕಾರ್ಯಾಚರಣೆ ಕೈಗೊಂಡಿತು. ನಾಪತ್ತೆಯಾದ ನಾಲ್ವರಿಗಾಗಿ ಶೋಧ ಮುಂದುವರಿದಿದೆ.