![images (1)](http://kannada.vartamitra.com/wp-content/uploads/2018/03/images-1-3.jpg)
ಒಡಿಸ್ಸಾ, ಮಾ.7- ಬಾಲಿವುಡ್ ನಟಿ ರವೀನಾಟಂಡನ್ ವಿರುದ್ಧ ಲಿಂಗರಾಜು ಪೆÇಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಭುವನೇಶ್ವರದ ಲಿಂಗರಾಜು ಪ್ರದೇಶದ ದೇವಸ್ಥಾನವೊಂದರಲ್ಲಿ ಶೂಟಿಂಗ್ ನಿರ್ಬಂಧಿತ ಸ್ಥಳದಲ್ಲಿ ರವೀನಾಟಂಡನ್ ಅವರು ಜಾಹೀರಾತೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರೆಂದು ಆರೋಪಿಸಿ ದೇಗುಲದವರು ದೂರು ನೀಡಿದ್ದರು.
ಈ ದೂರಿನ ಅನ್ವಯ ಭುವನೇಶ್ವರದ ಪೆÇಲೀಸರು ರವೀನಾಟಂಡನ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರಾದರೂ, ಆ ಬಗ್ಗೆ ದೇಗುಲದ ಕಮಿಟಿಯವರು ಯಾವುದೇ ರೀತಿಯ ಸಾಕ್ಷ್ಯಧಾರಗಳನ್ನು ಒದಗಿಸಲು ವಿಫಲರಾಗಿದ್ದಾರೆ.
ಅಷ್ಟಕ್ಕೂ ಅಲ್ಲಿ ನಡೆದಿದ್ದು ಯಾವುದೇ ಚಿತ್ರದ ಅಥವಾ ಜಾಹೀರಾತಿನ ಚಿತ್ರೀಕರಣವಲ್ಲ , ಬಾಲಿವುಡ್ನ ನಟಿ ಪ್ರಿಯಾಂಕಾ ಚೋಪ್ರಾ ಲಿಂಗರಾಜು ದೇಗುಲಕ್ಕೆ ಭೇಟಿ ನೀಡಿದ್ದಾಗ ದೇಗುಲದ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಮಹಿಳಾ ಸಿಬ್ಬಂದಿಗಳು ಟಂಡನ್ ಜೊತೆ ತಮ್ಮ ಮೊಬೈಲ್ಗಳಲ್ಲಿ ಸೆಲ್ಫಿ ತೆಗೆದುಕೊಂಡಿದ್ದರು.
ಇದನ್ನೇ ಚಿತ್ರದ ಹಾಗೂ ಜಾಹೀರಾತಿನ ಚಿತ್ರೀಕರಣವೆಂದು ಭಾವಿಸಿದ್ದ ದೇಗುಲದವರು ರವೀನಾ ವಿರುದ್ಧ ದೂರು ದಾಖಲಿಸಿದ್ದರು, ಅಲ್ಲಿ ಯಾವುದೇ ಚಿತ್ರೀಕರಣ ನಡೆಯದಿದ್ದರೂ ಕೂಡ ರವೀನಾಟಂಡನ್ ಮಾತ್ರ ಕೆಲ ಹೊತ್ತು ಮುಜುಗರ ಅನುಭವಿಸಿದ್ದು ಮಾತ್ರ ವಿಪರ್ಯಾಸ.