ಮುಂಬೈ,ಮಾ.7-ಬಾಲಿವುಡ್ಲ್ಲಿ ಮಿಂಚುತ್ತಿರುವ ಕನ್ನಡತಿ ದೀಪಿಕಾ ಪಡುಕೋಣೆ ಹಾಗೂ ರಬೀರ್ ಕಪೂರ್ 3-4 ತಿಂಗಳಲ್ಲಿ ಸತಿ-ಪತಿಗಳಾಗುತ್ತಾರೆ.
ಇಬ್ಬರ ಮದುವೆಗೆ ಸಂಬಂಧಪಟ್ಟಂತೆ ಪ್ರಕಾಶ್ ಪಡುಕೋಣೆ ಹಾಗೂ ಉಜ್ಜಲಾ ಪಡುಕೋಣೆ ಕಳೆದ ವಾರ ಬೆಂಗಳೂರಿನಿಂದ ಮುಂಬೈಗೆ ಬಂದು ರಣಬೀರ್ ತಂದೆ-ತಾಯಿಗಳೊಂದಿಗೆ ಮದುವೆ ವಿಚಾರವಾಗಿ ಮಾತುಕತೆ ನಡೆಸಿದ್ದಾರಂತೆ.
ಇಬ್ಬರ ಮದುವೆ ಮುಂಬೈನಲ್ಲಿ ನಡೆಯುವುದಕ್ಕೆ ಎಲ್ಲಾ ರೀತಿಯ ಸಿದ್ದತೆಯನ್ನು ಮಾಡಿಕೊಳ್ಳುವುದಕ್ಕೆ ಉಭಯ ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ದೀಪಿಕಾ ಪಡುಕೋಣೆ ತನ್ನ ಭಾವಿ ಅತ್ತೆ ಮಾವನೊಂದಿಗೆ ಲಂಡನ್ನಲ್ಲಿ ಹಾಲಿಡೇ ಯನ್ನು ಎಂಜಾಯ್ ಮಾಡುತ್ತಿದ್ದು, ಈ ನಡುವೆ ಲಂಡನ್ ನಲ್ಲಿ ಮೂವರೂ ಕೂಡ ಮದುವೆಗೆ ಬೇಕಾದ ಶಾಪಿಂಗ್ ಮಾಡುತ್ತಿದ್ದಾರಂತೆ.