![Thief-17122017074544-1000x0](http://kannada.vartamitra.com/wp-content/uploads/2018/03/Thief-17122017074544-1000x0-678x381.jpg)
ಬೆಂಗಳೂರು,ಮಾ.7-ವಾಯುವಿಹಾರ ಮಾಡುತ್ತಿದ್ದ ಮಹಿಳೆಯನ್ನು ತಡೆದು ನಿಲ್ಲಿಸಿದ ಇಬ್ಬರು ದರೋಡೆಕೋರರು ಸಹಾಯ ಮಾಡುವಂತೆ ನಟಿಸಿ 120 ಗ್ರಾಂ ಸರ ಬಿಚ್ಚಿಸಿಕೊಂಡು ಪರಾರಿಯಾಗಿರುವ ಘಟನೆ ಕೆ.ಆರ್.ಪುರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಿಪ್ಪಣ್ಣ ಲೇಔಟ್ ನಿವಾಸಿ ಮಹಾಲಕ್ಷ್ಮಿ (58) ಎಂಬುವರು ಮುಖ್ಯರಸ್ತೆಯಲ್ಲಿ ನಿನ್ನೆ ಸಂಜೆ 5 ಗಂಟೆಯಲ್ಲಿ ವಾಯುವಿಹಾರ ಮಾಡುತ್ತಿದ್ದರು.
ಈ ವೇಳೆ ಬೈಕ್ನಲ್ಲಿ ಬಂದ ಇಬ್ಬರು ದರೋಡೆಕೋರರು ಇವರನ್ನು ತಡೆದು ನಿಲ್ಲಿಸಿ, ನಾವು ಸೆಕ್ಯೂರಿಟಿ ಗಾರ್ಡ್ಗಳು, ಮುಂದೆ ಕಳ್ಳತನ ನಡೆದಿದೆ. ನೀವು ಈ ರೀತಿ ಆಭರಣ ಧರಿಸಿಕೊಂಡು ಹೋಗಬೇಡಿ. ನಿಮ್ಮ ಸರ ಬಿಚ್ಚುಕೊಡಿ. ನಾವು ಕವರ್ನಲ್ಲಿ ಹಾಕಿ ಕೊಡುತ್ತೇವೆ ಎಂದು ಹೇಳಿ ಅವರ ಗಮನ ಸೆಳೆದಿದ್ದಾರೆ.
ಇವರ ಮಾತನ್ನು ನಂಬಿದ ಮಹಿಳೆ ಸರವನ್ನು ಬಿಚ್ಚಿ ಅವರ ಕೈಗೆ ಕೊಟ್ಟಿದ್ದು , ಆ ಇಬ್ಬರು ದರೋಡೆಕೋರರು ಕವರಿನಲ್ಲಿ ಹಾಕುವಂತೆ ನಟಿಸಿ ಮೊದಲೇ ತಂದಿದ್ದ ಕಲ್ಲುಗಳಿದ್ದ ಕವರ್ನ್ನು ಮಹಿಳೆಗೆ ಕೊಟ್ಟು ಇತ್ತ ಪರಾರಿಯಾಗಿದ್ದಾರೆ.
ಮಹಾಲಕ್ಷ್ಮಿ ಅವರು ಮನೆಗೆ ಹೋಗಿ ನೋಡಿಕೊಂಡಾಗ ಅದರಲ್ಲಿ ಸರದ ಬದಲಾಗಿ ಕಲ್ಲುಗಳಿರುವುದು ಗಮನಿಸಿ ಮೋಸ ಹೋಗಿರುವುದನ್ನು ಅರಿತು ತಕ್ಷಣ ಕೆ.ಆರ್.ಪುರ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಕೆ.ಆರ್.ಪುರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ದರೋಡೆಕೋರರಿಗಾಗಿ ಶೋಧ ಕೈಗೊಂಡಿದ್ದಾರೆ.