ಆ್ಯಂಬುಲೆನ್ಸ್ಗಳಿಗೂ ಟ್ರಾಫಿಕ್ ಜಾಮ್ ಪರದಾತ
ಬೆಂಗಳೂರು, ಮಾ.7-ನಗರದ ದಿನನಿತ್ಯದ ಸಂಚಾರ ದಟ್ಟಣೆಯಲ್ಲೇ ಸಿಲುಕಿ ನಲುಗುವ ಆ್ಯಂಬುಲೆನ್ಸ್ಗಳು ಇಂದು ಯಡಿಯೂರಿನ ಗಣಪತಿ ದೇವಸ್ಥಾನದ ಬಳಿ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಜೆಡಿಎಸ್ ಪಾದಯಾತ್ರೆ ಹಿನ್ನೆಲೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಜನ ಹಾಗೂ ವಾಹನಗಳ ದಟ್ಟಣೆ ಎದುರಾಗಿದ್ದರಿಂದ ಇದರ ನಡುವೆ ಸಿಲುಕಿದ ಆ್ಯಂಬುಲೆನ್ಸ್ ಸುಗಮ ಮಾರ್ಗ ಸಿಗದೆ ಸ್ವಲ್ಪ ಸಮಯ ಅಲ್ಲೇ ನಿಲ್ಲುವಂತಾಯಿತು.
ತಕ್ಷಣವೇ ಕಾರ್ಯಪ್ರವೃತ್ತರಾದ ಪೆÇಲೀಸರು ಆ್ಯಂಬುಲೆನ್ಸ್ ತೆರಳಲು ಅನುವು ಮಾಡಿಕೊಟ್ಟರು.