ಮೈಸೂರು, ಮಾ.7-ಸ್ಕೂಟರ್ ಸವಾರರನ್ನು ಅಡ್ಡಗಟ್ಟಿ ಬ್ಲೇಡ್ನಿಂದ ಕೊಯ್ದು ಅವರ ಬಳಿ ಇದ್ದ ಸಾವಿರಾರು ರೂ. ನಗದು ದೋಚಿರುವ ಘಟನೆ ನಗರದ ಎನ್.ಆರ್.ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಬನ್ನಿಮಂಟಪದ ಜೋಡಿ ತೆಂಗಿನಮರ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವಂದೇ ಮಾತರಂ ಸ್ಲಂ ನಿವಾಸಿಗಳಾದ ಖಾಲಿದ್ ಹಾಗೂ ಶಫೀರ್ ಎಂಬುವರನ್ನು ನಾಲ್ಕು ಮಂದಿ ದುಷ್ಕರ್ಮಿಗಳು ರಸ್ತೆಯಲ್ಲಿ ತಡೆದು ನಿಲ್ಲಿಸಿ ಅವರ ಮೇಲೆ ಬ್ಲೇಡ್ನಿಂದ ಹಲ್ಲೆ ಮಾಡಿ ಅವರ ಬಳಿ ಇದ್ದ 70 ಸಾವಿರ ನಗದು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಹಲ್ಲೆಗೊಳಗಾದವರು ಕಿರುಚಿಕೊಂಡಾಗ ಸಾರ್ವಜನಿಕರು ಸ್ಥಳಕ್ಕೆ ಬಂದಿದ್ದರಿಂದ ದರೋಡೆಕೋರರು ಬೈಕ್ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಎನ್.ಆರ್.ಠಾಣೆ ಪೆÇಲೀಸರು ಬೈಕ್ ವಶಪಡಿಸಿಕೊಂಡು ಮುಂದಿನ ಕ್ರಮ ವಹಿಸಿದ್ದಾರೆ.