![images (1)](http://kannada.vartamitra.com/wp-content/uploads/2018/03/images-1-2.jpg)
ಮಂಡ್ಯ, ಮಾ.6- ಶಾರ್ಟ್‍ಸಕ್ರ್ಯೂಟ್‍ನಿಂದಾಗಿ 10ಕ್ಕೂ ಹೆಚ್ಚು ಮನೆಗಳ ವಿದ್ಯುತ್ ಉಪಕರಣಗಳು ಸುಟ್ಟಿರುವ ಘಟನೆ ದ್ವಾರಕನಗರದಲ್ಲಿ ನಡೆದಿದೆ.
ನಿನ್ನೆ ಸಂಜೆ ದ್ವಾರಕನಗರದಲ್ಲಿ ವಿದ್ಯುತ್ ಕಂಬದಿಂದ ಮನೆಗಳಿಗೆ ಸಂಪರ್ಕಿಸುವ ಮಾರ್ಗದಲ್ಲಿ ಶಾರ್ಟ್‍ಸಕ್ರ್ಯೂಟ್ ಆದ ಪರಿಣಾಮ 10ಕ್ಕೂ ಹೆಚ್ಚು ಮನೆಯ ಟಿವಿ, ರೆಫ್ರಿಜಿರೇಟರ್, ಫ್ಯಾನ್ ಸೇರಿದಂತೆ ಹಲವಾರು ವಿದ್ಯುತ್ ಉಪಕರಣಗಳು ಸುಟ್ಟು ಹೋಗಿವೆ.
ಶಾರ್ಟ್‍ಸಕ್ರ್ಯೂಟ್‍ನಿಂದಾಗಿ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ. ಈ ಬಗ್ಗೆ ಗ್ರಾಮಸ್ಥರು ಈಗಾಗಲೇ ಚೆಸ್ಕಾಂ ಇಲಾಖೆಯವರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮಕೈಗೊಳ್ಳದೇ ಇರುವುದರಿಂದ ಆಕ್ರೋಶಗೊಂಡಿದ್ದಾರೆ.