ನೈರುತ್ಯ ರೈಲ್ವೆ ಆ್ಯಕ್ಟ್ ಇಲಾಖೆಯ ತರಬೇತಿ ಪಡೆದವರನ್ನು ಖಾಯಂ ನೇಮಕಾತಿ ಮಾಡಿಕೊಳ್ಳಬೇಕೆಂದು ಒತ್ತಾಯಾ

ಬೆಂಗಳೂರು ಮಾ.6-ನೈರುತ್ಯ ರೈಲ್ವೆ ಆ್ಯಕ್ಟ್ ಇಲಾಖೆಯು ಕಂಪೀಟೆಟೀವ್ ಆ್ಯಕ್ಟ್ ಅಪ್ರೈಂಟಿಸ್ ತರಬೇತಿ ಪಡೆದವರನ್ನು ಖಾಲಿ ಇರುವ ಹುದ್ದೆಗಳಿಗೆ ಖಾಯಂ ನೇಮಕಾತಿ ಮಾಡಿಕೊಳ್ಳಬೇಕೆಂದು ಅಪ್ರೈಂಟಿಸ್ ಅಭ್ಯರ್ಥಿಗಳು ರಾಜ್ಯಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಭ್ಯರ್ಥಿ ರವಿ ಗಾಣಗೇರಾ 2010ರಿಂದ 2017ರವರೆಗೂ ಸುಮಾರು 2,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೈರುತ್ಯ ರೈಲ್ವೆಯ ಹುಬ್ಬಳ್ಳಿ, ಮೈಸೂರು, ಬೆಂಗಳೂರಿನ ಕಾರ್ಯಾಗಾರದಲ್ಲಿ 1 ಮತ್ತು 2 ವರ್ಷ ಆ್ಯಕ್ಟ್ ಅಪ್ರೈಂಟಿಸ್ ತರಬೇತಿ ಪಡೆದು ಆಲ್ ಇಂಡಿಯಾ ನಡೆಸುವ ವೃತ್ತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರಮಾಣಪತ್ರವನ್ನು ಹೊಂದಿದ್ದೇವೆ. ಇಲ್ಲಿಯವರೆಗೂ ರಾಜ್ಯದ 26 ಜಿಲ್ಲೆಗಳ ಪೈಕಿ ತರಬೇತಿ ಪಡೆದ ಅಭ್ಯರ್ಥಿಗಳನ್ನು ರೈಲ್ವೆಯಲ್ಲಿ ಖಾಯಂ ಕೆಲಸಕ್ಕೆ ಸಬ್‍ರಿಕ್ಯೂಟ್ ಮುಖಾಂತರ ನೇರ ನೇಮಕಾತಿ ಮಾಡಿಕೊಳ್ಳಲು ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ. ಇದೇ ರೀತಿ ಮಹಾರಾಷ್ಟ್ರ ರಾಜ್ಯದ ಮುಂಬೈ ನಗರದ ಕೇಂದ್ರೀಯ ವಲಯದಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಯನ್ನು ಕಾಲಕಾಲಕ್ಕೆ 4,786 ತರಬೇತಿ ಪಡೆದ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮಾಡಿಕೊಂಡಿದ್ದಾರೆ. ಆದರೆ ರಾಜ್ಯದಲ್ಲಿ ಈ ರೀತಿ ನಿರ್ಲಕ್ಷ್ಯ ಮಾಡುತ್ತಿರುವುದು ದುಃಖದ ಸಂಗತಿ ಎಂದು ತಿಳಿಸಿದರು.

ಅಭ್ಯರ್ಥಿಗಳನ್ನು ಖಾಯಂಗೊಳಿಸದೆ ಇದ್ದಲ್ಲಿ ವಿಷ ತೆಗೆದುಕೊಂಡು ಸಾಯಲು ಕೂಡ ಹಿಂಜರಿಯುವುದಿಲ್ಲ. ಇದೇ ವಿಚಾರವಾಗಿ ಇದೇ 12 ರಂದು ಬಿಜೆಡಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ