ಕೆ.ಎಸ್.ನರಸಿಂಹಸ್ವಾಮಿ ಜನ್ಮ ಶತಮಾನೋತ್ಸವ: ಮಾ10ರಂದು ಕೆಎಸ್ನ ಪ್ರಶಸ್ತಿ ಮತ್ತು ಕೆಎಸ್ನ ಕಾವ್ಯಗಾಯನ ಪ್ರಶಸ್ತಿ ಸಮಾರಂಭ
ಬೆಂಗಳೂರು, ಮಾ.6- ಕೆ.ಎಸ್.ನರಸಿಂಹಸ್ವಾಮಿ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಇದೇ 10ರಂದು ಸಂಜೆ 5.30ಕ್ಕೆ ಜಯನಗರ ಎಚ್.ಎನ್.ಕಲಾಕ್ಷೇತ್ರದಲ್ಲಿ ಕೆಎಸ್ನ ಪ್ರಶಸ್ತಿ ಮತ್ತು ಕೆಎಸ್ನ ಕಾವ್ಯಗಾಯನ ಪ್ರಶಸ್ತಿ ಸಮಾರಂಭವನ್ನು ಹಮ್ಮಿಕೊಂಡಿದ್ದೇವೆ ಎಂದು ಕೆ.ಎಸ್.ನರಸಿಂಹ್ವಾಮಿ ಟ್ರಸ್ಟ್ ಅಧ್ಯಕ್ಷ ನರಹಳ್ಳಿ ಬಾಲಸುಬ್ರಹ್ಮಣ್ಯ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2017ನೇ ಸಾಲಿನ ಕೆಎಸ್ನ ಪ್ರಶಸ್ತಿಯನ್ನು ಹಿರಿಯ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ ರವರಿಗೆ ಪ್ರಶಸ್ತಿ ನೀಡಲಾಗುವುದು ಮತ್ತು ಕೆಎಸ್ನ ಕಾವ್ಯ ಗಾಯನ ಪ್ರಶಸ್ತಿಯನ್ನು ಸುಗಮ ಸಂಗೀತ ಕಲಾವಿದ ವೈ.ಕೆ.ಮುದ್ದುಕೃಷ್ಣ ಅವರಿಗೆ ನೀಡಲಾಗುವುದು. ಪ್ರಶಸ್ತಿ ಜತೆಗೆ 25 ಸಾವಿರ ನಗದು ಪ್ರಶಸ್ತಿ ಫಲಕವನ್ನು ವಿತರಿಸಲಾಗುವುದು. ಜತೆಗೆ ಕೆಎಸ್ನ ಅಧ್ಯಯನ ಸಂಶೋಧಕರನ್ನು ಪೆÇ್ರೀ ಕೆಎಸ್ನ ಅಧ್ಯಯನ ಪುರಸ್ಕಾರ ಪ್ರಶಸ್ತಿ ಪುರಸ್ಕøತರಿಗೆ 15ಸಾವಿರ ನಗದು ನೀಡಿ ಪೆÇ್ರೀ ಅಲ್ಲದೆ ಕಾರ್ಯಕ್ರಮದಲ್ಲಿ ವಾಸ ಜನಾಂಗದಲ್ಲಿ ಸಾಹಿತ್ಯ, ಸಂಗೀತ, ನಾಟಕ ಮುಂತಾದವುಗಳಲ್ಲಿ ಅಭಿರುಚಿ ಬೆಳೆಸುವುದು.
ಅಲ್ಲದೆ, ಸರ್ಕಾರಿ ಶಾಲೆಗಲ್ಲಿ ಕಾವ್ಯಗಾಯನ ಶಿಬಿರವನ್ನು ಏರ್ಪಡಿಸಲಾಗುವುದು. ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಅಪರ ಕಾರ್ಯದರ್ಶಿ ಕಿರಣ್ ಜಿ.ವಿ.ಸಿಂಗ್ ಪ್ರಶಸ್ತಿ ಪ್ರದಾನ ಮಾಡುವರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕರಾದ ಬಲವಂತರಾವ್ ಪಾಟೀಲ್ ಭಾಗವಹಿಸುವರು.