ಹೈದರಾಬಾದ್, ಮಾ.6-ನಕ್ಸಲರಿಂದ ಪ್ರಾಣ ಬೆದರಿಕೆ ಇರುವುದರಿಂದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಒದಗಿಸಲಾಗಿರುವ ಬಂದೋಬಸ್ತ್ ಹೆಚ್ಚಿಸಲಾಗಿದೆ. ಅವರ ಭದ್ರತೆಗಾಗಿ 7 ಕೋಟಿ ರೂ. ಮೌಲ್ಯದ ವಿಶೇಷ ಬುಲೆಟ್ ಪ್ರೂಫ್ ಬಸ್ ಖರೀದಿಸಲು ರಾಜ್ಯ ಗೃಹ ಇಲಾಖೆ ನಿರ್ಧರಿಸಿದೆ.
ತೆಲಂಗಾಣ ಮತ್ತು ಛತ್ತೀಸ್ಗಢ ಗಡಿ ಭಾಗದಲ್ಲಿ ನಡೆದ ಎನ್ಕೌಂಟರ್ನಲ್ಲಿ 12 ನಕ್ಸಲರು ಹತರಾದ ನಂತರ ಮಾವೋವಾದಿಗಳು ಆಡಳಿತರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ಎಸ್) ನಾಯಕರನ್ನು ಕೊಲ್ಲುವುದಾಗಿ ಪ್ರಾಣ ಬೆದರಿಕೆ ಹಾಕಿರುವುದರಿಂದ ಕೆಸಿಆರ್ ಸೇರಿದಂತೆ ಸಚಿವರು ಮತ್ತು ಮುಖಂಡರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ.