ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ ಉಪಯೋಗಕ್ಕಾಗಿ 10 ವಾಹನಗಳು
ಬೆಂಗಳೂರು, ಮಾ.5-ಆರ್ಥಿಕ ಮತ್ತು ಸಾಂಖಿಕ ನಿದೇರ್ಶನಾಲಯದ ಅಧೀನದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ ಉಪಯೋಗಕ್ಕಾಗಿ 10 ವಾಹನಗಳನ್ನು ಇಂದು ನೀಡಲಾಯಿತು.
ವಿಧಾನಸೌದದ ಮುಂಭಾಗ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಯೋಜನೆ, ಸಾಂಖಿಕ ಇಲಾಖೆ ಸಚಿವ ಆರ್.ಆರ್.ಸೀತಾರಾಂ ಹೊಸ ವಾಹನಗಳಿಗೆ ಚಾಲನೆ ನೀಡಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯಲ್ಲಿ ಬೆಳೆ ಕಟಾವು, ಪ್ರಯೋಗಗಳು, ವಾರ್ಷಿಕ ಕೈಗಾರಿಕಾ ಸಮೀಕ್ಷೆ, ರಾಷ್ಟ್ರೀಯ ವರದಿ ಸಮೀಕ್ಷೆ ಮೊದಲಾದ ಸಮೀಕ್ಷಾ ಕಾರ್ಯಗಳನ್ನು ಕೈಗೊಳ್ಳಲಿವೆ.
ಕಳೆದ 20 ವರ್ಷಗಳಿಂದಲೂ ಹೊಸ ವಾಹನಗಳನ್ನು ಸಂಗ್ರಹಣಾಧಿಕಾರಿಗಳಿಗೆ ಒದಗಿಸಿರಲಿಲ್ಲ. ಈಗಿದ್ದ ವಾಹನಗಳು ಹಳೆಯದಾಗಿದ್ದವು. ಹಾಗಾಗಿ ಬೆಂಗಳೂರು ಗ್ರಾಮಾಂತರ, ವಿಜಯಪುರ, ಬೆಳಗಾವಿ, ದಕ್ಷಿಣ ಕನ್ನಡ, ಚಿತ್ರದುರ್ಗ, ಹಾಸನ, ಬಳ್ಳಾರಿ, ಕೋಲಾರ, ಧಾರವಾಡ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ 10 ವಾಹನಗಳನ್ನು ಇಂದು ನೀಡಲಾಯಿತು.