ಕೆಜಿಎಫ್, ಮಾ.5- ನಗರ ಹೊರವಲಯದ ದೊಡ್ಡಕಂಬಳಿ ಗ್ರಾಮದಲ್ಲಿಂದು ಉಂಟಾದ ಭಾರೀ ಬೆಂಕಿಯಿಂದ ಅಪಾರ ಪ್ರಮಾಣದ ಬಾಳೆ ಮತ್ತು ಮಾವು ಬೆಳೆ ಸಂಪೂರ್ಣ ಸುಟ್ಟುಭಸ್ಮವಾಗಿ ಲಕ್ಷಾಂತರ ರೂ.ನಷ್ಟವುಂಟಾಗಿದೆ.
ಗ್ರಾಮದ ಕಾಶಿನಾಥ್ ಎಂಬುವರು ತಮ್ಮ ಜಮೀನಿನಲ್ಲಿ ಮಾವು ಮತ್ತು ಬಾಳೆ ಬೆಳೆದಿದ್ದರು. ಇಳುವರಿ ಬರುವ ಸಮಯವಾಗಿದ್ದು, ಪಕ್ಕದ ನೀಲಗಿರಿ ತೋಪಿನಲ್ಲಿ ಉಂಟಾದ ಬೆಂಕಿ ಇವರ ಜಮೀನಿಗೂ ವ್ಯಾಪಿಸಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸುಮಾರು 70 ಸಾವಿರ ರೂ.ನ ಡ್ರಿಪ್ಸ್ ಇರಿಗೇಷನ್ ಪೈಪುಗಳು ಕೂಡ ಸುಟ್ಟುಹೋಗಿವೆ. ಸುದ್ದಿ ತಿಳಿದು ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಯಶಸ್ವಿಯಾಗಿದ್ದಾರೆ.