ಬಾಗೇಪಲ್ಲಿ, ಮಾ.5- ಪ್ರೀತ್ಸೆ ಎಂದು ಕಿರುಕುಳ ನೀಡುತ್ತಿದ್ದ ಬಾಲಕನ ಕಾಟಕ್ಕೆ ಮನ ನೊಂದ ಅಪ್ರಾಪ್ತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಮೂಲಂಗಿ ಚಟ್ಲಪಲ್ಲಿ ಗ್ರಾಮದಲ್ಲಿ ನಡೆದಿದೆ.
ಘಟನೆಯ ವಿವರ: ಬಾಲಕನೊಬ್ಬ ಗ್ರಾಮದ ನಿವಾಸಿಯಾದ ಪಕ್ಕದ ಮನೆಯ ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದ ಈ ವಿಷಯ ಪೆÇೀಷಕರಿಗೆ ಗೊತ್ತಾಗಿ ಹಲವು ಬಾರಿ ಬಾಲಕನಿಗೆ ಎಚ್ಚರಿಕೆ ನೀಡಿ ಬುದ್ಧಿವಾದ ಹೇಳಿದ್ದರು.
ಆದರೂ ಈ ಬಾಲಕ ತನ್ನ ಚಾಳಿ ಬಿಡದೆ ಮುಂದುವರೆಸುತ್ತಿದ್ದ. ಅಲ್ಲದೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಕಳೆದ ಮೂರು ದಿನಗಳ ಹಿಂದೆಯೂ ಸಹ ಬಾಲಕಿಯ ತಂದೆ ಬಾಲಕನಿಗೆ ಮತ್ತೆ ಬುದ್ಧಿವಾದ ಹೇಳಿದರೂ ಆದರೂ ಬುದ್ಧಿ ಕೇಳದ ಬಾಲಕ ಬಾಲಕಿಯ ಹಿಂದೆ ಬಿದ್ದು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಅಲ್ಲದೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಮನ ನೊಂದ ಅಪ್ರಾಪ್ತೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬಾಲಕನಿಗೆ ಥಳಿತ: ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಬಾಲಕನನ್ನು ಸ್ಥಳೀಯರು ಹಿಡಿದು ಕಟ್ಟಿ ಹಾಕಿ ಥಳಿಸಿ ನಂತರ ಬಾಗೇಪಲ್ಲಿ ಪೆÇಲೀಸರಿಗೆ ಒಪ್ಪಿಸಿದ್ದಾರೆ.