ತುಮಕೂರು, ಮಾ.5- ಬಾರ್ನಲ್ಲಿ ಗುರಾಯಿಸಿದರೆಂಬ ಕಾರಣಕ್ಕೆ ಗುಂಪೊಂದು ಇಬ್ಬರು ಯುವಕರಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಎನ್ಪಿಇಎಸ್ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾತ್ರಿ ನಗರದ ಲಕ್ಷ್ಮೀ ಬಾರ್ನಲ್ಲಿ ಕುಳಿತಿದ್ದ ಗುಂಪಿನ ಕಡೆ ಸಂದೇಶ ಮತ್ತು ಮೋಹನ್ ಎಂಬುವರು ಗುರಾಯಿಸಿದರೆಂಬ ಕಾರಣಕ್ಕೆ ಬಾರ್ನಲ್ಲೇ ಜಗಳವಾಗಿದೆ.
ತದನಂತರ ಈ ಗುಂಪು ಹೊರಗೆ ಹೋಗಿ ಇವರಿಬ್ಬರಿಗಾಗಿ ಕಾದು ಕುಳಿತು ನಂತರ ಈ ಇಬ್ಬರು ಯುವಕರು ನಡೆದುಕೊಂಡು ಎಸ್ಇಟಿ ಬಡಾವಣೆಯ 6ನೆ ತಿರುವಿನಲ್ಲಿ ರಾತ್ರಿ 11 ಗಂಟೆಗೆ ನಡೆದು ಹೋಗುತ್ತಿದ್ದಾಗ ಹಿಂಬಾಲಿಸಿ ಬಂದು ಚಾಕುವಿನಿಂದ ಇವರಿಬ್ಬರಿಗೂ ಇರಿದು ಪರಾರಿಯಾಗಿದ್ದಾರೆ. ತಕ್ಷಣ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು , ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿದ ಎನ್ಇಪಿಎಸ್ ಸಬ್ ಇನ್ಸ್ಪೆಕ್ಟರ್ ರಾಘವೇಂದ್ರ ಸಿಬ್ಬಂದಿಗಳೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಹಲ್ಲೆ ನಡೆಸಿರುವವರಿಗಾಗಿ ಶೋಧ ಕೈಗೊಂಡಿದ್ದಾರೆ.