ಗದಗ, ಮಾ.5-ಸಮಯ ಸಾಧಿಸಿ ವಾಹನಗಳಿಂದ ಪೆಟ್ರೋಲ್ ಕದಿಯುತ್ತಿದ್ದ ಖದೀಮರಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕರಿಯಪ್ಪ ಎಂಬಾತ ರಾತ್ರಿ ವೇಳೆ ಯಾರೂ ಇಲ್ಲದ ಸಮಯ ಸಂಚು ರೂಪಿಸಿ ಮನೆಯ ಹೊರಗೆ ಹಾಗೂ ರಸ್ತೆ ಪಕ್ಕದಲ್ಲಿ ನಿಲ್ಲಿಸುತ್ತಿದ್ದ ವಾಹನಗಳಿಂದ ಪೆಟ್ರೋಲ್ ಕದ್ದು ಪರಾರಿಯಾಗುತ್ತಿದ್ದರು. ಆದರೆ ಇಂದು ಕಳ್ಳ ಕರಿಯಪ್ಪ ಪೆಟ್ರೋಲ್ ಕದಿಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಸ್ಥಳೀಯರು ಪೆಟ್ರೋಲ್ ಕಳ್ಳನಿಗೆ ಸಖತ್ ಗೂಸಾ ನೀಡಿ ಪೆÇಲೀಸರಿಗೆ ಒಪ್ಪಿಸಿದರು.