ತೆಲುಗು ವಿಜ್ಞಾನ ಸಮಿತಿ ವತಿಯಿಂದ ಯುಗಾದಿ ಉತ್ಸವ ಮತ್ತು ಕೃಷ್ಣದೇವರಾಯ ಪ್ರಶಸ್ತಿ ಪುರಸ್ಕಾರ ಸಮಾರಂ¨s
ಬೆಂಗಳೂರು,ಮಾ.5- ತೆಲುಗು ವಿಜ್ಞಾನ ಸಮಿತಿ ವತಿಯಿಂದ ಇದೇ 9ರಂದು 4.30ಕ್ಕೆ ಯುಗಾದಿ ಉತ್ಸವ ಮತ್ತು ಕೃಷ್ಣದೇವರಾಯ ಪ್ರಶಸ್ತಿ ಪುರಸ್ಕಾರ ಸಮಾರಂಭವನ್ನು ಮಲ್ಲೇಶ್ವರಂನ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ಹಮ್ಮಿಕೊಂಡಿರುವುದಾಗಿ ಸಮಿತಿಯ ಅಧ್ಯಕ್ಷರಾದ ರಾಧಕೃಷ್ಣರಾಜು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿಯು ಪ್ರತಿ ವರ್ಷ ಯುಗಾದಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದು , ಉತ್ಸವದಲ್ಲಿ ಕಲೆ, ಸಾಹಿತ್ಯ, ಸಂಗೀತ, ನಟನೆ ಸೇರಿದಂತೆ ಇನ್ನಿತರ ವಿಭಾಗಗಳಲ್ಲಿ ಅನನ್ಯ ಸೇವೆಗೈದಿರುವ ಮಹಾನೀಯರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ಈ ಸಾಲಿನ ಪುರಸ್ಕಾರವನ್ನು ನಟಿ ಪದ್ಮಶ್ರೀ ಪುರಸ್ಕರತರಾದ ಡಾ.ಭಾರತೀ ವಿಷ್ಣುವರ್ಧನ್ ಹಾಗೂ ತೆಲುಗು ನಟ ಎಂ.ಮೋಹನ್ ಅವರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯಪಾಲ ವಜುಭಾಯಿ ವಾಲಾ, ರಾಜ್ಯಸಭಾ ಸದಸ್ಯ ಸುಬ್ಬರಾಯ ರೆಡ್ಡಿ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.