ಬೀದರ್, ಮಾ.5-ಕಾಂಗ್ರೆಸ್ ಪಕ್ಷಕ್ಕೆ ಅಶೋಕ್ಖೇಣಿ ಸೇರ್ಪಡೆ ವಿರೋಧಿಸಿ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು.
ನಗರದ ಹೃದಯಭಾಗದಲ್ಲಿ ಜಮಾವಣೆಗೊಂಡ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಖೇಣಿ ಅವರ ಸೇರ್ಪಡೆಗೆ ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು. ನೈಸ್ ಸಂಸ್ಥೆಯ ಹಗರಣದ ಹಣೆಪಟ್ಟಿ ಹೊಂದಿರುವ ಖೇಣಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರುವುದು ಸ್ವಾಗತಾರ್ಹವಲ್ಲ. ಪಕ್ಷದ ವರ್ಚಸ್ಸಿಗೆ ಇಂಥವರಿಂದ ಧಕ್ಕೆಯಾಗಲಿದೆ ಎಂದು ಕಿಡಿಕಾರಿದರು.