ಸಾರ್ವಜನಿಕರ ತೆರಿಗೆ ಹಣದಿಂದ ಬಿಬಿಎಂಪಿ ಸದಸ್ಯರಿಗೆ ಐ-ಪಾಡ್: ಎನ್.ಆರ್.ರಮೇಶ್ ಆರೋಪ
ಬೆಂಗಳೂರು,ಮಾ.5- ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಂಡು ಬಿಬಿಎಂಪಿ ಸದಸ್ಯರಿಗೆ ಐ-ಪಾಡ್ ವಿತರಿಸಿರುವ ಬಿಬಿಎಂಪಿ ಕ್ರಮ ಜನವಿರೋಧಿ ಎಂದು ಪಾಲಿಕೆ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಜರಿದಿದ್ದಾರೆ.
99 ಲಕ್ಷ ಖರ್ಚು ಮಾಡಿ 198 ಸದಸ್ಯರು ಮತ್ತು 20 ನಾಮನಿರ್ದೇಶಿತ ಸದಸ್ಯರಿಗೆ 44 ಸಾವಿರ ರೂ. ಮೌಲ್ಯದ ಐ-ಪಾಡ್ ವಿತರಿಸಿರುವುದಕ್ಕೆ ಸಮಜಾಯಿಷಿ ನೀಡುವಂತೆ ರಮೇಶ್ ಅವರು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತು ಮೇಯರ್ ಸಂಪತ್ರಾಜ್ ಅವರಿಗೆ ಪತ್ರ ಬರೆದಿದ್ದಾರೆ.
2018-19ನೇ ಸಾಲಿನ ಬಜೆಟ್ ಮಂಡನೆಯಾದ ಎರಡೇ ದಿನದಲ್ಲಿ 218 ಸದಸ್ಯರಿಗೆ ಟೆಂಡರ್ ಕರೆಯದೆ ನೇರವಾಗಿ ಖರೀದಿಸಿ ವಿತರಿಸಿರುವುದು ಕಾನೂನು ಬಾಹಿರ. ಆದರೂ ತಾವು ಸರ್ಕಾರದ ಅನುಮೋದನೆ ಪಡೆಯುವುದಕ್ಕೂ ಮುನ್ನವೇ ಕೇವಲ ಎರಡೇ ದಿನದಲ್ಲಿ ಐ-ಪಾಡ್ ಖರೀದಿಸಿ ವಿತರಿಸಿರುವುದು ಸರಿಯಾದ ಕ್ರಮವಲ್ಲ ಎಂದು ಅವರು ಪತ್ರದಲ್ಲಿ ದೂರಿದ್ದಾರೆ.
ಬಿಬಿಎಂಪಿ ಸದಸ್ಯರು 44 ಸಾವಿರ ಖರ್ಚು ಮಾಡಿ ಐ-ಪಾಡ್ ಖರೀದಿಸುವ ಸಾಮಥ್ರ್ಯ ಹೊಂದಿದ್ದಾರೆ. ಆದರೂ ಅವರಿಗೆ ತೆರಿಗೆದಾರರ ಹಣದಿಂದ ಟ್ಯಾಬ್ ವಿತರಿಸಲಾಗಿದೆ. ಇದರ ಬದಲು ಬಿಬಿಎಂಪಿ ಶಾಲಾಕಾಲೇಜುಗಳ ಶೌಚಾಲಯಗಳಲ್ಲಿ ಸಾನಿಟರಿ ಇನ್ಸಿನೇಟರ್ ಯಂತ್ರ ಅಳವಡಿಸಲು ಇಲ್ಲವೇ ಪೆÇ್ರಜೆಕ್ಟರ್ ಟಿವಿ ಅಳವಡಿಸಿಕೊಳ್ಳಲು ಈ ಹಣವನ್ನು ಬಳಕೆ ಮಾಡಿಕೊಳ್ಳಬಹುದಿತ್ತು ಎಂದು ಎನ್.ಆರ್.ರಮೇಶ್ ಸಲಹೆ ಮಾಡಿದ್ದಾರೆ.