
ಬೆಂಗಳೂರು, ಮಾ.5-ಹೋಳಿ ಆಟವಾಡುವ ವೇಳೆ ಇಬ್ಬರು ಯುವಕರ ನಡುವೆ ಜಗಳವಾಗಿ ಹೊಡೆದಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿವೇಕನಗರ ಪೆÇಲೀಸ್ ಠಾಣೆ ವ್ಯಾಪ್ತಿಯ ರುದ್ರಪ್ಪ ಗಾರ್ಡನ್ನಲ್ಲಿ ರಾತ್ರಿ 8 ಗಂಟೆ ಸುಮಾರಿನಲ್ಲಿ ಬಣ್ಣ ಎರಚಿಕೊಂಡು ಹೋಳಿ ಆಟವಾಡುತ್ತಿದ್ದಾಗ ದಿಲೀಪ್ಕುಮಾರ್ ಮತ್ತು ಜೀವನ್ ಎಂಬುವರ ನಡುವೆ ಜಗಳವಾಗಿದೆ.
ಈ ಸಂದರ್ಭದಲ್ಲಿ ಇಬ್ಬರೂ ಹೊಡೆದಾಡಿಕೊಂಡು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಸಂಬಂಧ ದಿಲೀಪ್ಕುಮಾರ್ ವಿವೇಕನಗರ ಠಾಣೆಗೆ ದೂರು ನೀಡಿದ್ದರೆ, ಜೀವನ್ ಸಹ ಪ್ರತಿದೂರು ನೀಡಿದ್ದಾರೆ.
ಇಬ್ಬರ ದೂರುಗಳನ್ನು ಸ್ವೀಕರಿಸಿರುವ ಪೆÇಲೀಸರು ತನಿಖೆ ಮುಂದುವರೆಸಿದ್ದಾರೆ.