ಬೈಕ್‍ನಲ್ಲಿ ಬಂದ ದರೋಡೆಕೋರರು ಎರಡು ಕಡೆ ಇಬ್ಬರನ್ನು ಬೆದರಿಸಿ ಮೊಬೈಲ್‍ಗಳನ್ನು ಕಸಿದು ಪರಾರಿ

ಬೆಂಗಳೂರು, ಮಾ.5-ಬೈಕ್‍ನಲ್ಲಿ ಬಂದ ದರೋಡೆಕೋರರು ಎರಡು ಕಡೆ ಇಬ್ಬರನ್ನು ಬೆದರಿಸಿ ಮೊಬೈಲ್‍ಗಳನ್ನು ಕಸಿದು ಪರಾರಿಯಾಗಿದ್ದಾರೆ.
ಜ್ಞಾನಭಾರತಿ:
ಕೆಂಪಮ್ಮ ದೇವಸ್ಥಾನ ಸಮೀಪದ 5ನೇ ಕ್ರಾಸ್‍ನಲ್ಲಿ ಮುರಳಿ ಎಂಬುವರು ರಾತ್ರಿ 10.15ರಲ್ಲಿ ಮೊಬೈಲ್‍ನಲ್ಲಿ ಮಾತನಾಡುತ್ತಾ ನಡೆದು ಹೋಗುತ್ತಿದ್ದರು.
ಈ ವೇಳೆ ಬೈಕ್‍ನಲ್ಲಿ ಬಂದ ದರೋಡೆಕೋರರು ಇವರ ಕೈಲಿದ್ದ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ.
ಆರ್.ಎಂ.ಸಿ.ಯಾರ್ಡ್:
ಹಾವೇರಿಗೆ ಹೋಗುವ ಸಲುವಾಗಿ ರಾತ್ರಿ 12.30ರಲ್ಲಿ ಬಸವರಾಜು ಎಂಬುವರು ಹೊಸಕೆರೆಹಳ್ಳಿ, ಗೊರಗುಂಟೆಪಾಳ್ಯದ ಬಸ್ ನಿಲ್ದಾಣದಲ್ಲಿ ಬಸ್‍ಗಾಗಿ ಕಾಯುತ್ತಾ ನಿಂತಿದ್ದಾಗ ಬೈಕ್‍ನಲ್ಲಿ ಬಂದ ಇಬ್ಬರು ದರೋಡೆಕೋರರು ಇವರನ್ನು ಬೆದರಿಸಿ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ.
ಈ ಎರಡೂ ಪ್ರಕರಣಗಳನ್ನು ಆಯಾಯ ಠಾಣೆ ಪೆÇಲೀಸರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ