ಬೀಜಿಂಗ್, ಮಾ.5-ವಿಶ್ವದ ಅತಿದೊಡ್ಡ ಸೇನಾಬಲ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾದ ಚೀನಾ ತನ್ನ ರಕ್ಷಣಾ ವೆಚ್ಚವನ್ನು ಈ ವರ್ಷ ಶೇ.8.1ರಷ್ಟು ಏರಿಸಿದ್ದು, ಅದು 175 ಶತಕೋಟಿ ಡಾಲರ್ಗಳಷ್ಟು ಹೆಚ್ಚಿದೆ. ಇದು ಭಾರತದ ರಕ್ಷಣಾ ಆಯವ್ಯಯಕ್ಕಿಂತಲೂ ಮೂರು ಪಟ್ಟು ಹೆಚ್ಚಳ.
ತನ್ನ ಮಿಲಿಟರಿ ಸಾಮಥ್ರ್ಯವನ್ನು ಮತ್ತಷ್ಟು ಹೆಚ್ಚಿಸಲು ಹಾಗೂ ಆಧುನೀಕರಣಗೊಳಿಸಲು ಉದ್ದೇಶಿಸಿರುವ ಚೀನಾ, ಕಳೆದ ವರ್ಷಕ್ಕಿಂತ ಶೇ.1.1ರಷ್ಟು ಅಧಿಕ ಬಜೆಟ್ ಅನುದಾನ ಮೀಸಲಿರಿಸಿದೆ. ಕಳೆದ ವರ್ಷ ಶೇ.7ರಷ್ಟು ಹೆಚ್ಚಿಸಿದ್ದ ಚೀನಾ ಈಗ ಶೇ.8.1ರಷ್ಟು ಅಧಿಕಗೊಳಿಸಿದೆ. ರಾಜಧಾನಿ ಚೀನಾದಲ್ಲಿ ಇಂದು ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್(ಎನ್ಸಿಪಿ) ಮಂಡಿಸಿದ ಬಜೆಟ್ನಲ್ಲಿ ರಕ್ಷಣಾ ಆಯವ್ಯಯವು 1.11 ಲಕ್ಷ ಕೋಟಿ ಯೆನ್ಗಳಿಗೆ (175 ಶತಕೋಟಿ ಡಾಲರ್ ಅಥವಾ ಸುಮಾರು 1,1383 ಲಕ್ಷ ಕೋಟಿ ರೂ.ಗಳು) ಹೆಚ್ಚಿಸಿದೆ.