ಆಸ್ಕರ್ 2018: ‘ದ ಶೇಪ್ ಆಫ್ ವಾಟರ್’ ಅತ್ಯುತ್ತಮ ಚಿತ್ರ

ಲಾಸ್‌ ಏಂಜಲಿಸ್‌ : 2018ನೇ ಸಾಲಿನ 90ನೇ ಆಸ್ಕರ್‌ ಪ್ರಶಸ್ತಿ ಪ್ರಕಟಗೊಂಡಿದ್ದು, ದ ಶೇಪ್ ಆಫ್ ವಾಟರ್ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಇದರ ನಿರ್ದೇಶಕರು ಗಿಲ್ಲೆರ್ಮೊ ಡೆಲ್ ಟೊರೊ ಈ ಸಾಲಿನ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗಳಿಸಿದ್ದಾರೆ. ಈ ಚಿತ್ರದ ನಿರ್ಮಾಪಕರು ಜೆ. ಮಿಲ್ಸ್ ಡೇಲ್ ಆಗಿದ್ದಾರೆ. ಅತ್ಯುತ್ತಮ ಚಿತ್ರ ಸೇರಿದಂತೆ ನಾಲ್ಕು ವಿಭಾಗಗಳಲ್ಲಿ ಶೇಪ್ ಆಫ್ ವಾಟರ್ ಪ್ರಶಸ್ತಿ ಗಳಿಸಿಕೊಂಡಿದೆ.

ಶೀತಲ ಯುದ್ಧದ ಫ್ಯಾಂಟಸಿ ಚಿತ್ರವಾಗಿರುವ ದ ಶೇಪ್ ಆಫ್ ವಾಟರ್ ನಲ್ಲಿ ಸ್ಯಾಲ್ಲಿ ಹಾಕಿನ್ಸ್ ಮೂಕ ದ್ವಾರಪಾಲಕಳಾಗಿ ನಟಿಸಿದ್ದು ಈಕೆ ಸರ್ಕಾರಿ ಪ್ರಯೋಗಾಲಯದಿಂದ ವಶಪಡಿಸಿಕೊಂಡ ಜನಚರ ಪ್ರಾಣಿ ಜೊತೆ ಪ್ರೀತಿಯಲ್ಲಿ ಬೀಳುತ್ತಾಳೆ
ತ್ರಿ ಬಿಲ್ ಬೋರ್ಡ್ಸ್ ಔಟ್ ಸೈಡ್ ಎಬ್ಬಿಂಗ್, ಮಿಸ್ಸೌರಿ ಸಿನಿಮಾದ ನಾಯಕಿ ಫ್ರಾನ್ಸೆಸ್ ಮೆಕ್ಡೋರ್ಮಂಡ್ ಈ ವರ್ಷದ ಅತ್ಯುತ್ತಮ ನಟಿಯಾಗಿ ಮತ್ತು ಡಾರ್ಕೆಸ್ಟ್ ಅವರ್ ಚಿತ್ರದ ನಟನೆಗೆ ಗ್ಯಾರಿ ಓಲ್ಡ್ಮನ್ ಅತ್ಯುತ್ತಮ ನಟನಾಗಿ ಹೊರಹೊಮ್ಮಿದ್ದಾರೆ.
ಅತ್ಯುತ್ತಮ ಒರಿಜಿನಲ್ ಸ್ಕೋರ್ ಕೂಡ ಶೇಪ್ ಆಫ್ ವಾಟರ್ ಗೆ ಹೋಗಿದ್ದು ಬ್ಲೇಡ್ ರನ್ನರ್ 2049 ಚಿತ್ರದ ಛಾಯಾಗ್ರಹಣಕ್ಕೆ ರೋಜರ್ ಡೀಕಿನ್ಸ್ ಅವರಿಗೆ ಅತ್ಯುತ್ತಮ ಛಾಯಾಗ್ರಹಕ ಪ್ರಶಸ್ತಿ ಲಭಿಸಿದೆ.
ಜೋರ್ದನ್ ಪೀಲ್ಸ್ ಅವರ ಗೆಟ್ ಔಟ್ ಅತ್ಯುತ್ತಮ ಚಿತ್ರಕಥೆ, ಜೇಮ್ಸ್ ಐವರಿಯವರ ಕಾಲ್ ಮಿ ಬೈ ಯುವರ್ ನೇಮ್ ಚಿತ್ರ ಅತ್ಯುತ್ತಮ ಅಳವಡಿಸಿದ ಚಿತ್ರಕಥೆ ಪ್ರಶಸ್ತಿ ಗಳಿಸಿಕೊಂಡಿದೆ.
ಅತ್ಯುತ್ತಮ ವಿಷುವಲ್ ಎಫೆಕ್ಟ್ ಚಿತ್ರ ಬ್ಲೇಡ್ ರನ್ನರ್ 2049, ಅತ್ಯುತ್ತಮ ಸಿನಿಮಾ ಸಂಕಲನ ಡಂಕಿರ್ಕ್, ಅತ್ಯುತ್ತಮ ಆನಿಮೇಷನ್ ಚಿತ್ರ ಡಿಯರ್ ಬಾಸ್ಕೆಟ್ ಬಾಲ್, ಅತ್ಯುತ್ತಮ ಆನಿಮೇಷನ್ ಫ್ಯೂಚರ್ ಚಿತ್ರ ಡಿಸ್ನಿ-ಪಿಕ್ಸರ್ ಅವರ ಕೊಕೊ ಚಿತ್ರಕ್ಕೆ ಲಭಿಸಿದೆ.
ಅತ್ಯುತ್ತಮ ವಿದೇಶಿ ಚಿತ್ರ ಪ್ರಶಸ್ತಿ ಎ ಫೆಂಟಾಸ್ಟಿಕ್ ವುಮನ್ ಗೆ ಲಭಿಸಿದೆ. ಚಿಲಿ ದೇಶದ ಚಿತ್ರವು ಮಂಗಳಮುಖಿ ಗಾಯಕನ ಹೋರಾಟದ ಬಗ್ಗೆ ಕೇಂದ್ರೀಕರಿಸುತ್ತದೆ. ಅತ್ಯುತ್ತಮ ಧ್ವನಿ ಮಿಶ್ರಣ ಮತ್ತು ಅತ್ಯುತ್ತಮ ಸಂಕಲನ ಡಂಕಿರ್ಕ್ ಚಿತ್ರಕ್ಕೆ ಸಂದಿದೆ.

ಪ್ರಶಸ್ತಿ ಪ್ರದಾನ ಸಮಾರಂಭ ಕಳೆದ ರಾತ್ರಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಲಾಸ್ ಏಂಜಲೀಸ್ ನ ಡೊಲ್ಬಿ ಥಿಯೇಟರ್ ನಲ್ಲಿ ನಡೆಯಿತು.


ಆಸ್ಕರ್ಪ್ರಶಸ್ತಿ 2018 ವಿಜೇತರ ಪಟ್ಟಿ

ಅತ್ಯುತ್ತಮ ನಟ-ಗೇರಿ ಓಲ್ಡ್‌ಮ್ಯಾನ್‌ (Darkest Hour ಚಿತ್ರದಲ್ಲಿನ ಅಭಿನಯಕ್ಕಾಗಿ)
ಅತ್ಯುತ್ತಮ ಹಾಡು: ಕ್ರಿಸ್ಟೆನ್ ಆ್ಯಂಡ್ರೆಸನ್‌-ಲೊಪೆಜ್‌ ಮತ್ತು ರಾಬರ್ಟ್‌ ಲೊಪೆಜ್ ಅವರ ‘ರಿಮೆಂಬರ್‌ ಮಿ’ ಹಾಡಿಗೆ ಲಭಿಸಿದೆ.
ಅತ್ಯುತ್ತಮ ಛಾಯಾಗ್ರಹಣ: ರೋಗರ್‌ ಎ ಡೀಕಿನ್ಸ್ (ಬ್ಲೇಡ್ ರನ್ನರ್‌ 2049 ಚಿತ್ರ)
ಮೂಲ ಚಿತ್ರಕತೆ: ಜೋರ್ಡನ್‌ ಪೀಲೆ (ಗೆಟ್‌ ಔಟ್‌ ಚಿತ್ರ)
ಅತ್ಯುತ್ತಮ ಕಿರುಚಿತ್ರ: ದಿ ಸೈಲೆಂಟ್‌ ಚೈಲ್ಡ್‌
ಅತ್ಯುತ್ತಮ ಸಾಕ್ಸ್ಯಾಚಿತ್ರ: ಹೆವನ್ ಈಸ್ ಎ ಟ್ರಾಫಿಕ್‌ ಜಾಮ್‌ ಆನ್ ದಿ 405
ಚಿತ್ರ ಸಂಕಲನ: ಲೀ ಸ್ಮಿತ್‌ (ಡಂಕಿರ್ರಿಕ್‌ ಚಿತ್ರ)
ಅತ್ಯುತ್ತಮ ವಿದೇಶಿ ಚಿತ್ರ: ‘ಎ ಫೆಂಟಾಸ್ಟಿಕ್‌ ವುಮೆನ್‌’
ಅತ್ಯುತ್ತಮ ಪೋಷಕ ಪಾತ್ರ: ಎಲಿಸನ್‌ ಜಾನ್ನಿ
ಎನಿಮೇಷನ್‌ ಕಿರುಚಿತ್ರ: ಡಿಯರ್ ಬಾಸ್ಕೆಟ್‌ಬಾಲ್‌
ಧ್ವನಿ ಸಂಕಲನ: ರಿಚಾರ್ಡ್‌ ಕಿಂಗ್‌ ಮತ್ತು ಅಲೆಕ್ಸ್ ಗಿಬ್ಸನ್‌ (ಡಂಕಿರ್ರಿಕ್‌ ಚಿತ್ರ)
ಸಾಕ್ಷ್ಯಾಚಿತ್ರ (ಫೀಚರ್‌):‘Icarus’
ಕಾಸ್ಟ್ಯೂಮ್‌ ಡಿಸೈನ್: ಮಾರ್ಕ್‌ ಬಿಡ್ಜ್ಸ್‌ ಮೇಕಪ್ ಮತ್ತು ಹೇರ್‌ಸ್ಟೈಲ್: ಕಜುಹಿರೋ ತ್ಸುಜಿ ಡೇವಿಡ್ ಮಲಿನೋವ್‌ಸ್ಕಿ ಮತ್ತು ಲ್ಯೂಸಿ ಸಿಬ್ಬಿಕ್ (Darkest Hour).
ಅತ್ಯುತ್ತಮ ಪೋಷಕ ನಟ: ಸ್ಯಾಮ್ ರಾಕ್‌ವೆಲ್‌

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ