ಲಾಸ್ ಏಂಜಲೀಸ್: ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ನಡೆಯುತ್ತಿರುವ 90 ನೇ ಆಸ್ಕರ್ ಸಮಾರಂಭದಲ್ಲಿ ಬಾಲಿವುಡ್ ನಟಿ ದಿ.ಶ್ರೀದೇವಿ ಮತ್ತು ನಟ ಶಶಿ ಕಪೂರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಅಮೆರಿಕದ ಲಾಸ್ ಏಂಜಲೀಸ್ ನ ಡೊಲ್ಬಿ ಥಿಯೇಟರ್ ನಲ್ಲಿ ನಡೆಯುತ್ತಿರುವ 2018 ನೇ ಸಾಲಿನ ಆಸ್ಕರ್ ಅಥವಾ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಫೆ. 24 ರಂದು ದುಬೈನ ಹೊಟೇಲ್ ವೊಂದರ ಬಾತ್ ಟಬ್ಬಿನಲ್ಲಿ ಬಿದ್ದು, ಅಕಾಲಿಕ ಮರಣಕ್ಕೀಡಾದ ಶ್ರೀದೇವಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಿನಿಮಾ ಕ್ಷೇತ್ರಕ್ಕೆ ಅವರು ನೀಡಿದ ಅಮೋಘ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ತುತಿಸಿ, ಅವರಿಗೆ ನಮನ ಸಲ್ಲಿಸಲಾಯಿತು. ಕಳೆಗಟ್ಟಿದ 90 ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಜೊತೆಗೆ ಬಾಲಿವುಡ್ ನಟ ಮತ್ತು ನಿರ್ಮಾಪಕ ಶಶಿ ಕಪೂರ್ ಅವರನ್ನು ಇದೇ ಸಂದರ್ಭದಲ್ಲಿ ನೆನೆದು, ಅವರ ಕೊಡುಗೆಗೆ ವಂದನೆ ಸಲ್ಲಿಸಲಾಯಿತು. ಕಳೆದ ವರ್ಷದ ಆಸ್ಕರ್ ಸಮಾರಂಭದಲ್ಲಿ ಭಾರರತದ ಹಿರಿಯ, ಖ್ಯಾತ ನಟ ಓಂ ಪುರಿ ಅವರಿಗೂ ಶ್ರದ್ಧಾಂಜಲಿ ಅರ್ಪಿಸಲಾಗಿತ್ತು.