ಮಾ.11ರಂದು ವೀರಶೈವ ವಧು-ವರರ ಸಮಾವೇಶ
ಬೆಂಗಳೂರು,ಮಾ.4- ಶ್ರೀ ಶರಣ ಸೇವಾ ಸಮಾಜದ ವತಿಯಿಂದ ವೀರಶೈವ ವಧು-ವರರ ಸಮಾವೇಶವನ್ನು ಮಾ.11ರಂದು ಬೆಳಗ್ಗೆ 11 ಗಂಟೆಗೆ ರಾಜಾಜಿನಗರದ 1ನೇ ಆರ್.ಬ್ಲಾಕ್ನ ಸಾಮೂಹಿಕ ಸಭಾಭವನದಲ್ಲಿ ಏರ್ಪಡಿಸಲಾಗಿದೆ.
ಈ ಸಮಾವೇಶದಲ್ಲಿ ವಧು-ವರರು ಭಾಗವಹಿಸಿ ಇದರ ಸದುಪಯೋಗಪಡಿಸಿ ಕೊಳ್ಳಬೇಕು. ಸಮಾವೇಶದಲ್ಲಿ ಭಾಗವಹಿಸಲಿಚ್ಚಿಸುವವರು ಹೆಚ್ಚಿನ ಮಾಹಿತಿಗಾಗಿ ದೂ: 080-23372963 ಸಂಪರ್ಕಿಸಬಹುದು ಎಂದು ಸಮಾಜದ ಕಾರ್ಯದರ್ಶಿ ಎಚ್.ಎಸ್.ಶಿವಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.