ಸುನಾಮಿ ಕಿಟ್ಟಿ ಸೇರಿ ನಾಲ್ವರು ಆರೋಪಿಗಳು ಐದು ದಿನ ಪೆÇಲೀಸ್ ವಶಕ್ಕೆ

ಸುನಾಮಿ ಕಿಟ್ಟಿ ಸೇರಿ ನಾಲ್ವರು ಆರೋಪಿಗಳು ಐದು ದಿನ ಪೆÇಲೀಸ್ ವಶಕ್ಕೆ
ಬೆಂಗಳೂರು, ಮಾ.4- ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಸುನಾಮಿ ಕಿಟ್ಟಿ ಸೇರಿ ನಾಲ್ವರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಐದು ದಿನ ಪೆÇಲೀಸ್ ವಶಕ್ಕೆ ಒಪ್ಪಿಸಲಾಗಿದೆ.
ಸ್ನೇಹಿತನ ಪತ್ನಿ ಜತೆ ತೌಶಿತ್ ಎಂಬಾತ ಸ್ನೇಹ ಬೆಳೆಸಿದ್ದಾನೆ ಎಂಬ ಜಿದ್ದಿನಿಂದ ಬಾರ್ ಸಪ್ಲೈಯರ್ ಹಾಗೂ ತೌಷಿತ್‍ನನ್ನು ಅಪಹರಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನಭಾರತಿ ಠಾಣೆ ಪೆÇಲೀಸರು ಸುನಾಮಿ ಕಿಟ್ಟಿ, ಯೋಗೇಶ್, ಸಂತೋಷ್ ಹಾಗೂ ಅರ್ಜುನ್‍ನನ್ನು ಬಂಧಿಸಿ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ