ಬೆಂಗಳೂರು:ಮಾ-4: ಬೆಂಗಳೂರಿನ ಯಶವಂತಪುರದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದಾರಾಮಯ್ಯ, ಪ್ರಧಾನಿ ಮೋದಿ ಮತ್ತು ಮಾಜಿ ಸಿ.ಎಂ.ಯಡಿಯೂರಪ್ಪ ವಿರುದ್ದ ಹರಿಹಾಯ್ದರು. ಬೆಂಗಳೂರಿನಲ್ಲಿ ವಿವಿಧ ಯೋಜನೆಗಳಿಗೆ ಸಿ.ಎಂ. ಶಂಕು ಸ್ಥಾಪನೆ ಮಾಡಿದರು. ಈ ವೇಳೆಯಲ್ಲಿ ಶೋಭ ಕರಂದ್ಲಾಜೆ ವಿರುದ್ದ ಮಾತನಾಡಿದ ಅವರು, ಶೋಭರವರು ಯಶವಂತಪುರದಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿ, ರಾಜಾಜಿನಗರದಲ್ಲಿ ಸ್ಪರ್ಧಿಸಿ ಚುನಾವಣೆಯಲ್ಲಿ ಸೋತರು, ಅಂತವರಿಂದ ನಾವು ಪಾಠ ಕಲಿಯಭೇಕಾಗಿಲ್ಲ ಎಂದು ಹೇಳಿದರು.
ಯಶವಂತಪುರದಲ್ಲಿ ಹಾಲಿ ಶಾಸಕರಾಗಿರುವ ಎಸ್.ಟಿ.ಸೋಮಶೇಖರ್ ಗೆಲ್ಲುತ್ತಾರೆ, ಸೂರ್ಯ ಪೂರ್ವದಲ್ಲಿ ಹುಟ್ಟುವದು ಏಷ್ಟು ಸತ್ಯವೊ ಸೋಮಶೇಖರ್ ಗೆಲ್ಲುವುದು ಅಷ್ಟೇ ಖಚಿತ ಎಂದು ಹೇಳಿದರು.
ಮಾಜಿ ಸಿ.ಎಂ.ಬಿಎಸ್ವ್ಯೆ ವಿರುದ್ದ ಮಾತನಾಡಿದ ಸಿ.ಎಂ. ಜ್ಯೆಲಿಗೆ ಹೋಗಿ ಬಂದವರಿಗೆ ನಮ್ಮ ಬಗ್ಗೆ ಮಾತನಾಡುವ ನ್ಯೆತಿಕತೆಯಿಲ್ಲ, ಭ್ರಷ್ಟಾಚಾರ ಮಾಡಿದವರಿಗೆ ಮತ ಹಾಕಭೇಡಿ, ಯಾವುದೇ ಕಾರಣಕ್ಕೂ ಮತ್ತೆ ಯಡಿಯೂರಪ್ಪ ಸಿ.ಎಂ. ಆಗಬಾರದು ಎಂದು ಸಭೆಯಲ್ಲಿ ಹೇಳಿದರು. ಪ್ರಧಾನಿ ಮೋದಿಯವರು ಏಷ್ಟು ಸಲ ರಾಜ್ಯಕ್ಕೆ ಬಂದು ಭಾಷಣ ಮಾಡಿದರೂ, ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದರು.
ಮತ್ತೇ ರಾಜ್ಯದಲ್ಲಿ ಕಾಂಗ್ರೇಸ್ ಅಧಿಕರಾಕ್ಕೆ ಬರುತ್ತದೆ, ಇದನ್ನು ತಡೆಯಲೂ ಯಾರಿಂದಲೂ ಸಾಧ್ಯವಿಲ್ಲ, ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಷ್ಟು ಸುಳ್ಳು ಹೇಳಿದವರನ್ನು ನಾನು ನೋಡಿಲ್ಲ ಎಂದು ಹೇಳಿದರು. ಪ್ರಧಾನಿ ಹುದ್ದೆಗೆ ಮೋದಿ ಅಗೌರವ ತೋರಿದ್ದಾರೆ, ಮೋದಿ ಪ್ರಧಾನಿಯಾಗಲು ನಾಲಾಯಕ್ ಎಂದು ಸಿ.ಎಂ. ಹೇಳಿದರು. ನಮ್ಮದು 10% ಭ್ರಷ್ಟಾಚರಾವಾದರೆ, ನಿಮ್ಮದು 90% ಭ್ರಷ್ಟಾಚಾರ, ಯಡಿಯೂರಪ್ಪ ಸರ್ಕಾರವಿದ್ದಾಗ 100 ಕ್ಕೆ 100 ರಷ್ಟು ಭ್ರಷ್ಟಾಚರವಿತ್ತು ಎಂದು ಹೇಳಿದರು.
ಬಿಜೆಪಿ ಸರ್ಕಾರವಿದ್ದಾಗ ಬೆಂಗಳೂರು ಸಿಟಿಯನ್ನು ಗಾರ್ಬೇಜ್ ಸಿಟಿ ಮಾಡಿದ್ದರು, ಭ್ರಷ್ಟಾಚಾರ ರಾಜ್ಯದಲ್ಲಿ ತಾಂಡವವಾಡುತ್ತಿತ್ತು, ಸಚಿವರು ಮತ್ತು ಶಾಸಕರು ಭ್ರಷ್ಟಾಚಾರದ ಆರೋಪದ ಮೇಲೆ ಜ್ಯೇಲಿಗೆ ಹೋಗಿ ಬಂದಿದ್ದಾರೆ, ಇಂತವರು ರಾಜ್ಯವನ್ನು ಉದ್ದಾರ ಮಾಡುವುದಿಲ್ಲವೆಂದು ಹೇಳಿದರು. ಬಿಜೆಪಿಯವರು ಸುಳ್ಳು ಹೇಳುವದರಲ್ಲಿ ನಿಸ್ಸೀಮರು, ಬರೀ ಘೋಷಣೆ ಮಾಡುತ್ತಾರೆ ಯಾವುದನ್ನು ಕಾರ್ಯರೂಪಕ್ಕೆ ತರುವುದಿಲ್ಲ ಎಂದ ಅವರು, ಇಂತ ಸುಳ್ಳು ಹೇಳುವವರನ್ನು ಎಲ್ಲೂ ನೋಡಿಲ್ಲ, ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ಹಾಕಭೇಡಿ ಎಂದು ಹೇಳಿದರು. ಬರುವ ವಿದಾನಸಭೆ ಚುನಾವಣೆಯಲ್ಲಿ ಬೆಂಗಳೂರು ನಗರದಲ್ಲಿ ನಾವು 25 ಕ್ಷೇತ್ರಗಳಲ್ಲಿ ಗೆಲವು ಸಾಧಿಸುತ್ತೇವೆ, ಎಂದು ಹೇಳಿದರು.