ಬೆಂಗಳೂರು, ಮಾ.4- ನಗರದಲ್ಲಿ ರಾತ್ರಿ ವೇಳೆ ಮಹಿಳೆಯರಿರಲಿ, ಪುರುಷರೂ ಒಬ್ಬಂಟಿಯಾಗಿ ಓಡಾಡಲು ಸಾಧ್ಯವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ನಿನ್ನೆ ಮಧ್ಯರಾತ್ರಿ ವಿಠ್ಠಲ್ ಮಲ್ಯ ರಸ್ತೆಯ ಐಟಿಸಿ ಗಾರ್ಡೇನಿಯಾ ಹೊಟೇಲ್ ಸಮೀಪ ನಡೆದು ಹೋಗುತ್ತಿದ್ದ ಉತ್ತರಾಖಂಡ್ ಮೂಲದ ನೀರಜ್ ಜೋಶಿ ಎಂಬ ಯುವಕನಿಗೆ ದರೋಡೆಕೋರರು ಚಾಕು ಇರಿದು ಪರಾರಿಯಾಗಿರುವ ಘಟನೆ ಕಬ್ಬನ್ಪಾರ್ಕ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೊಟೇಲ್ ಮ್ಯಾನೇಜ್ಮೆಂಟ್ ಟ್ರೈನಿ ಕೆಲಸ ಮಾಡುತ್ತಿದ್ದ ಜೋಶಿ ನಿನ್ನೆ ರಾತ್ರಿ ಕೆಲಸ ಮುಗಿಸಿ ನಡೆದು ಹೋಗುತ್ತಿದ್ದಾಗ ಅಡ್ಡಗಟ್ಟಿದ ದರೋಡೆಕೋರರು ಚಾಕು ತೋರಿಸಿ ಹಣ, ಮೊಬೈಲ್ ದೋಚಲು ಯತ್ನಿಸಿದರು.
ಈ ಸಂದರ್ಭದಲ್ಲಿ ಜೋಶಿ ಸಹೋದ್ಯೋಗಿಗಳು ನೆರವಿಗೆ ಬಂದಾಗ ದರೋಡೆಕೋರರು ಚಾಕುವಿನಿಂದ ಕುತ್ತಿಗೆ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಕಬ್ಬನ್ಪಾರ್ಕ್ ಠಾಣೆ ಪೆÇಲೀಸರು ಪರಾರಿಯಾಗಿರುವ ದರೋಡೆಕೋರರ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.