ಲಾಲ್ಬಾಗ್ನಲ್ಲಿ ಫೋಟ ಶೂಟ್ಗೆ ಬ್ರೇಕ್
ಬೆಂಗಳೂರು,ಮಾ.4-ಲಾಲ್ಬಾಗ್ನಲ್ಲಿ ಪ್ರತಿನಿತ್ಯ ಸಾವಿರಾರು ಜನರು ಭೇಟಿ ಕೊಡ್ತಾರೆ. ನೂರಾರು ಜನರು ವಾಕಿಂಗ್ ಮಾಡಿ ರಿಲ್ಯಾP್ಷï ಮಾಡಲು ಬರ್ತಾರೆ. ಆದರೇ ಇತ್ತೀಚೆಗೆ ಲಾಲ್ಬಾಗ್ನಲ್ಲಿ ಜನರಿಗಿಂತ ಹೆಚ್ಚು ಕ್ಯಾಮರಾಗಳೇ ಮಾತನಾಡಲಾರಂಭಿಸಿವೆ. ಇದರಿಂದ ಜನರಿಗೆ ಕಿರಿಕಿರಿ ಉಂಟಾಗುತ್ತಿದ್ದರಿಂದ ತೋಟಗಾರಿಕಾ ಇಲಾಖೆ ಇಲ್ಲಿ ಫೆÇೀಟೋ ಶೂಟ್ಗೆ ಬ್ರೇಕ್ ಹಾಕಿದೆ.
ಕಬ್ಬನ್ಪಾರ್ಕ್ ಬಳಿಕ ಇದೀಗ ಲಾಲ್ಬಾಗ್ನಲ್ಲೂ ಫೆÇೀಟೋ ಶೂಟ್ ನಿರ್ಬಂಧಿಸಿ ತೋಟಗಾರಿಕಾ ಇಲಾಖೆ ಆದೇಶ ಹೊರಡಿಸಿದೆ. ಇತ್ತೀಚಿಗೆ ಹೆಚ್ಚಾಗಿದ್ದ ಫೆÇೀಟೋ ಶೂಟ್ ಹಾಗೂ ಕ್ಯಾಮರಾ ಕಿರಿ-ಕಿರಿಯಿಂದ ಪ್ರವಾಸಿಗರನ್ನು ರಕ್ಷಿಸಲು ತೋಟಗಾರಿಕಾ ಇಲಾಖೆ ಈ ದಿಟ್ಟ ಕ್ರಮಕ್ಕೆ ಮುಂದಾಗಿದೆ.
ಲಾಲ್ಬಾಗ್ ಎಷ್ಟು ಸುಂದರ ಉದ್ಯಾನವನವೂ ಅಷ್ಟೇ ಸೂಕ್ಷ್ಮವಾದ ಪ್ರದೇಶ. ಯಾಕೆಂದರೆ ಇಲ್ಲಿ ಜೇನುಹುಳುಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಫೆÇೀಟೋ ಶೂಟ್ಗಳ ಪ್ಲ್ಯಾಶ್ ಲೈಟ್ಗಳಿಂದ ಜನರಿಗೆ ತೊಂದರೆ ಕೊಡುವ ಸಾಧ್ಯತೆ ಇದೆ. ಈಗಾಗಲೇ ಲಾಲ್ಬಾಗ್ನಲ್ಲಿ ಹಲವು ಬಾರಿ ಜೇನುನೊಣದ ಕಾಟದಿಂದ ಜನರು ಕಷ್ಟ ಅನುಭವಿಸಿದ್ದಾರೆ. ಹೀಗಾಗಿ ಮತ್ತೊಮ್ಮೆ ಯಾವುದೇ ದುರ್ಘಟನೆಗಳು ನಡೆಯಬಾರದೆಂಬ ಕಾರಣಕ್ಕೆ ಫೆÇೀಟೋ ಶೂಟ್ ನಿರ್ಬಂಧಿಸಲಾಗಿದೆ .
ಕೇವಲ ಜೇನುಹುಳು ಮಾತ್ರವಲ್ಲದೇ ಸೀಮೆಹುಳು, ಪಕ್ಷಿಗಳಿಗೂ ಧಕ್ಕೆಯಾಗುತ್ತಿತ್ತು. ಇದಲ್ಲದೇ ಫ್ರಿ ವೆಡ್ಡಿಂಗ್ ಶೂಟ್, ಪ್ರೆಗೆನ್ಸಿ ಶೂಟ್ಸೇರಿದಂತೆ ವಿವಿಧ ಫೆÇೀಟೋ ಶೂಟ್ಗೆ ಬರೋ ಜನರು ಅಲ್ಲೇ ಬಟ್ಟೆ ಬದಲಿಸುತ್ತಿದ್ದರಿಂದ ಪ್ರವಾಸಿಗರಿಗೆ ಹಾಗೂ ನಡಿಗೆದಾರರಿಗೆ ತೀವ್ರ ಮುಜುಗರ ಎದುರಾಗುತ್ತಿತ್ತು. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು.
ಹೀಗಾಗಿ ಫೆÇೀಟೋ ಶೂಟ್ ಬ್ಯಾನ್ ಮಾಡಿದ್ದೇವೆ. ಕೇವಲ ಫೆÇೀಟೋ ಶೂಟ್ ಮಾತ್ರ ನಿರ್ಬಂಧಿಸಲಾಗಿದ್ದು, ಪ್ರವಾಸಿಗರು ಮೊಬೈಲ್ಗಳಲ್ಲಿ ಫೆÇೀಟೋ ತೆಗೆದುಕೊಳ್ಳಲು ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.