ಖೋಟಾನೋಟು ತಯಾರಿಸುತ್ತಿದ್ದ ಅಡ್ಡೆ ಮೇಲೆ ದಾಳಿ: ಇಬ್ಬರ ಬಂಧನ
ಬೆಂಗಳೂರು, ಮಾ.4- ವಿಜಯನಗರದ ಮನೆಯೊಂದರಲ್ಲಿ ಖೋಟಾನೋಟು ತಯಾರಿಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೆÇಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಚೋಳನಪಾಳ್ಯದ ಚೇತನ್ (34) ಹಾಗೂ ವಿಜಯನಗರದ ಉದಯ್ಕುಮಾರ್ (38) ಬಂಧಿತ ಆರೋಪಿಗಳು.
ಆರೋಪಿಗಳಿಬ್ಬರು ವಿಜಯನಗರದ 5ನೆ ಕ್ರಾಸ್, 7ನೆ ಮುಖ್ಯರಸ್ತೆಯಲ್ಲಿರುವ ಮನೆಯೊಂದರಲ್ಲಿ 2000, 500 ಮತ್ತು 200ರೂ. ಮುಖಬೆಲೆಯ ಖೋಟಾನೋಟು ತಯಾರು ಮಾಡುತ್ತಿದ್ದರು.
ಅಸಲಿ ನೋಟುಗಳನ್ನು ಕಲರ್ ಪ್ರಿಂಟರ್ ಮೂಲಕ ನಕಲಿ ನೋಟು ತಯಾರಿಸಿ ಅವುಗಳನ್ನು ನೈಜ ನೋಟುಗಳೆಂದು ನಂಬಿಸಿ ಸಾರ್ವಜನಿಕ ವಲಯದಲ್ಲಿ ಚಲಾವಣೆ ಮಾಡುತ್ತ ದೇಶದ ಆರ್ಥಿಕ ವ್ಯವಸ್ಥೆಗೆ ಧಕ್ಕೆ ತರುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ಈ ಕುರಿತಂತೆ ಬಂದ ಖಚಿತ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆಗಿಳಿದ ಕೇಂದ್ರ ಅಪರಾಧ ವಿಭಾಗದ ಮಹಿಳೆ ಮತ್ತು ಮಾದಕ ದ್ರವ್ಯದಳದ ಎಸಿಪಿ ಮೋಹನ್ಕುಮಾರ್ ನೇತೃತ್ವದ ತಂಡ ನಿನ್ನೆ ಖೋಟಾನೋಟು ತಯಾರಿಕೆ ಅಡ್ಡೆ ಮೇಲೆ ದಿಢೀರ್ ದಾಳಿ ನಡೆಸಿ 500 ಮತ್ತು 200ರೂ. ಮುಖಬೆಲೆಯ 1,57,000 ಮೌಲ್ಯದ 440 ಖೋಟಾನೋಟುಗಳು, ಒಂದು ಕಲರ್ ಪ್ರಿಂಟರ್, ಪೇಪರ್ ಕಟರ್, ಮೂರು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರ ವಿರುದ್ಧ ವಿಜಯನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.