ಕಾಶ್ಮೀರ ಕಣವೆಯಲ್ಲಿ ಮುಂದುವರಿದ ಪಾಕಿಸ್ತಾನ ಪುಂಡಾಟ

ಜಮ್ಮು, ಮಾ.4-ಕಾಶ್ಮೀರ ಕಣವೆಯಲ್ಲಿ ಮತ್ತೆ ಪಾಕಿಸ್ತಾನದ ಪುಂಡಾಟ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ ಮುಂಚೂಣಿ ನೆಲೆಗಳು ಮತ್ತು ಗಡಿ ಗ್ರಾಮಗಳ ಮೇಲೆ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿವೆ.
ಬಾಲಕೋಟೆ ವಲಯದಲ್ಲಿ ನಿನ್ನೆ ಮಧ್ಯರಾತ್ರಿಯಿಂದ ಗುಂಡು ಮತ್ತು ಶೆಲ್ ದಾಳಿ ಆರಂಭಿಸಿದ ಪಾಕ್ ಸೈನಿಕರು ಎರಡು ತಾಸುಗಳ ಕಾಲ ಪುಂಡಾಡ ಮುಂದುವರಿಸಿದವು. ಭಾರತೀಯ ಯೋಧರು ದಿಟ್ಟ ಪ್ರತ್ಯುತ್ತರ ನೀಡಿದ ಬಳಿಕ ತೆಪ್ಪಗಾದವರು ಎಂದು ಪೆÇಲೀಶ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಕಿಸ್ತಾನದ ಷೆಲ್ ದಾಳಿಯಲ್ಲಿ ಸಾವು-ನೋವು ಅಥವಾ ಆಸ್ತಿ-ಪಾಸ್ತಿ ನಷ್ಟದ ಬಗೆ ತಕ್ಷಣಕ್ಕೆ ವರದಿಗಳಿಲ್ಲ.
ಪಾಕಿಸ್ತಾನವು ಇತ್ತೀಚಿನ ದಿನಗಳಲ್ಲಿ ಗಡಿ ಭಾಗದ ಭಾರತೀಯ ಗ್ರಾಮಗಳು ಮತ್ತು ಸೇನಾ ಮುಂಚೂಣಿ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸುತ್ತಿರುವ ಪ್ರಕರಣಗಳು ಪುನರಾವರ್ತಿತವಾಗುತ್ತಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ