ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: ನಾಲ್ಕು ಜಾನುವಾರುಗಳು ಸಜೀವ ದಹನ
ಚನ್ನರಾಯಪಟ್ಟಣ,ಮಾ.4- ರೈತರೊಬ್ಬರ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ನಾಲ್ಕು ಜಾನುವಾರುಗಳು ಸಜೀವ ದಹನಗೊಂಡಿರುವುದಲ್ಲದೆ ಅಪಾರ ಪ್ರಮಾಣದ ಕೊಬ್ಬರಿ ನಾಶವಾಗಿದೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಗೌಡಗೆರೆ ಹೊಸೂರು ಗ್ರಾಮದ ರೈತ ನಾಗೇಶ್ ಎಂಬುವವರಿಗೆ ಸೇರಿದ ಕೊಟ್ಟಿಗೆಗೆ ತಡರಾತ್ರಿ ಆಕಸ್ಮಿಕ ಬೆಂಕಿ ತಗುಲಿದೆ.
ಇದು ಯಾರ ಗಮನಕ್ಕೂ ಬರದ ಪರಿಣಾಮ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎರಡು ಎಮ್ಮೆ ಹಾಗೂ ಎರಡು ಕುರಿಗಳು ಸಜೀವ ದಹನಗೊಂಡಿರುವುದಲ್ಲದೆ ಸಂಗ್ರಹಿಸಿಡಲಾಗಿದ್ದ ಅಪಾರ ಪ್ರಮಾಣದ ಕೊಬ್ಬರಿ ಅಗ್ನಿಗೆ ಆಹುತಿಯಾಗಿದೆ.
ಮುಂಜಾನೆ ನಾಗೇಶ್ ಎದ್ದಾಗಲೇ ಈ ವಿಷಯ ಬೆಳಕಿಗೆ ಬಂದಿದ್ದು, ತಕ್ಷಣ ನೆರೆಹೊರೆಯವರೆಲ್ಲ ಸೇರಿ ಬೆಂಕಿ ನಂದಿಸುವಷ್ಟರಲ್ಲಿ ಕೊಟ್ಟಿಗೆಯಲ್ಲಿದ್ದ ಎಲ್ಲ ವಸ್ತುಗಳು ಸುಟ್ಟು ಭಸ್ಮವಾಗಿದ್ದವು.
ಈ ಬಗ್ಗೆ ಚನ್ನರಾಯಪಟ್ಟಣ ಠಾಣೆ ಪೆÇಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ