ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಬೆಂಕಿ ಅವಘಡ ಪ್ರಕರಣ: ಮಾಜಿ ಸಚಿವ ಸೊಗಡು ಶಿವಣ್ಣ ಆಸ್ಪತ್ರೆಗೆ ಭೇಟಿ
ತುಮಕೂರು,ಮಾ.4- ಶಾರ್ಟ್ಸಕ್ರ್ಯೂಟ್ನಿಂದ ಜಿಲ್ಲಾಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಸಂಭವಿಸಿದ ಬೆಂಕಿ ಅವಘಡ ಸಂಬಂಧ ಮಾಜಿ ಸಚಿವ ಸೊಗಡು ಶಿವಣ್ಣ ಇಂದು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಬಳಿ ಮಾಹಿತಿ ಪಡೆದುಕೊಂಡರು.
ಅಪಾಯದಿಂದ ಪಾರಾದ 4 ನವಜಾತ ಶಿಶುಗಳು ದಾಖಲಾಗಿರುವ ಶ್ರೀದೇವಿ ಮೆಡಿಕಲ್ ಕಾಲೇಜಿಗೆ ಇಂದು ಬೆಳಗ್ಗೆ ಭೇಟಿ ನೀಡಿದ ಅವರು, ನವಜಾತಶಿಶುಗಳ ಸುರಕ್ಷೆ ಹಾಗೂ ಆರೋಗ್ಯದ ಬಗ್ಗೆ ನಿಗಾವಹಿಸಬೇಕೆಂದು ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಟಿ.ಎ.ವೀರಭದ್ರಯ್ಯ, ಡಾ.ಮುಕ್ತಾಂಭರವರಿಗೆ ಸೂಚಿಸಿದರು.
ಅನಾಹುತ ಸಂಭವಿಸಿದ ವೇಳೆ ಆಸ್ಪತ್ರೆ ಸಿಬ್ಬಂದಿ ರಮೇಶ್ ಅವರ ಸಮಯ ಪ್ರಜ್ಞೆಯಿಂದ ಶಿಶುಗಳು ಪ್ರಾಣಾಪಾಯದಿಂದ ಪಾರಾಗಿವೆ ಎಂದು ಅಭಿನಂದನೆ ತಿಳಿಸಿದ ಸೊಗಡು ಶಿವಣ್ಣ , ಚಿಕಿತ್ಸೆ ಪಡೆಯತ್ತಿರುವ ರಮೇಶ್ಗೆ ಶೀಘ್ರ ಗುಣಮುಖರಾಗಿ ಎಂದು ಹಾರೈಸಿದರು.
ಶ್ರೀದೇವಿ ಮೆಡಿಕಲ್ ಕಾಲೇಜಿಗೆ ಸೇರಿಸಲಾಗಿದ್ದು, ಇನ್ನು ಏಳು ಮಕ್ಕಳನ್ನು ಸಿದ್ದಗಂಗಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೈದ್ಯರು ತಿಳಿಸಿದರು. ಈ ವೇಳೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ.ಪಿಮಹೇಶ್ ಕೂಡ ಮಾಜಿ ಸಚಿವರಿಗೆ ಸಾಥ್ ನೀಡಿದರು.