ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಖತರ್ನಾಕ್ ಕಳ್ಳ ಪೊಲೀಸ ಬಲೆಗೆ
ಬೆಂಗಳೂರು, ಮಾ.4- ಮೋಜಿನ ಜೀವನ ನಡೆಸಲು ರಾಜಾಜಿನಗರ ಸುತ್ತಮುತ್ತಲ ಪ್ರದೇಶಗಳಲ್ಲಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಖತರ್ನಾಕ್ ಕಳ್ಳನೊಬ್ಬ ಸಿಸಿಬಿ ಪೆÇಲೀಸರ ಬಲೆಗೆ ಬಿದ್ದಿದ್ದಾನೆ.
ಅಂದ್ರಹಳ್ಳಿ ಸಮೀಪದ ಶ್ರೀಚಕ್ರನಗರ ನಿವಾಸಿ ಶಶಿಕುಮಾರ್ ಅಲಿಯಾಸ್ ಶಶಿ (25) ಪೆÇಲೀಸರ ಬಲೆಗೆ ಬಿದ್ದ ಖತರ್ನಾಕ್ ಕಳ್ಳ.
ಆರೋಪಿ ಕದ್ದ ವಾಹನಗಳನ್ನು ಶ್ರೀಚಕ್ರ ನಗರದಲ್ಲಿ ಶೇಖರಿಸಿಟ್ಟಿದ್ದಾನೆ ಎಂಬ ಬಗ್ಗೆ ಮಾಹಿತಿ ಪಡೆದು ಸ್ಥಳದಲ್ಲಿದ್ದ ಎರಡೂವರೆ ಲಕ್ಷ ಮೌಲ್ಯದ ಏಳು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜ್ಞಾನಭಾರತಿಯಲ್ಲಿ ನಡೆದಿದ್ದ ಪ್ರತಾಪ್ ಎಂಬ ರೌಡಿ ಶೀಟರ್ ಕೊಲೆ ಪ್ರಕರಣ, ಬಸವೇಶ್ವರನಗರ ಮತ್ತು ಚಂದ್ರಾ ಲೇಔಟ್ನಲ್ಲಿ ನಡೆದಿದ್ದ ರಾಬರಿ ಪ್ರಕರಣದ ಆರೋಪಿಯಾಗಿದ್ದ ಶಶಿ ನ್ಯಾಯಾಲಯಕ್ಕೂ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ. ಈತನ ವಿರುದ್ಧ ನಾನ್ಬೇಲಬಲ್ ವಾರೆಂಟ್ ಕೂಡ ಜಾರಿಯಾಗಿತ್ತು ಎಂದು ಪೆÇಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿ ಮತ್ತು ಆತನ ಜತೆಗಿದ್ದ ಇಬ್ಬರು ಕಾನೂನು ಸಂಘರ್ಷದಲ್ಲಿದ್ದ ಬಾಲಕರ ಕಡೆಯಿಂದ ರಾಜಾಜಿನಗರ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಹನ ಕಳವು ಮಾಡಿಸುತ್ತಿದ್ದ ಎನ್ನಲಾಗಿದೆ.
ಈತನ ವಶದಲ್ಲಿದ್ದ ಎರಡೂವರೆ ಲಕ್ಷ ಮೌಲ್ಯದ ಒಂದು ಆ್ಯಕ್ಟೀವ್ ಹೋಂಡಾ, ಯಮಹಾ ಫ್ಯಾಸಿನೋ ಮತ್ತು ಇತರ ಐದು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.