ಸೂಪರ್ ಸ್ಟಾರ್ ರಜನೀಕಾಂತ್‌ ಅವರ ’ಕಾಲ’ ಮೊದಲ ಟೀಸರ್‌ ಬಿಡುಗಡೆ 

ಚೆನ್ನೈ:ಮಾ-2: ಸೂಪರ್ ಸ್ಟಾರ್ ರಜನೀಕಾಂತ್‌ ಅವರ ಬಹು ನಿರೀಕ್ಷಿತ ತಮಿಳು ಚಿತ್ರ “ಕಾಲ’ ಮೊದಲ ಅಧಿಕೃತ ಟೀಸರ್‌ ಹೋಳಿ ಹಬ್ಬದ ಸಂಭ್ರಮದ ನಡುವೆಯೇ ಬಿಡುಗಡೆಯಾಗಿದ್ದು  ಸಿನಿ ಪ್ರಿಯರನ್ನು ಆಕರ್ಷಿಸುತ್ತಿದೆ.

ಕಾಲ ಕರಿಕಾಲನ್‌ ಎಂದೂ ಕರೆಯಲ್ಪಡುವ ಕಾಲಾ ಗ್ಯಾಂಗ್‌ಸ್ಟರ್‌ ಕಥೆಯನ್ನು ಒಳಗೊಂಡಿದ್ದು ಇದನ್ನು ಪಾ ರಂಜಿತ್‌ ನಿರ್ದೇಶಿಸಿದ್ದಾರೆ. ವಂಡರ್‌ಬಾರ್‌ ಫಿಲಂಸ್‌ ಇದನ್ನು ನಿರ್ಮಿಸಿದೆ. ಮೂಲ ತಮಿಳು ಚಿತ್ರ ಇತರ ಭಾಷೆಗಳಿಗೂ ಡಬ್‌ ಆಗಿದೆ.

ರಜನೀಕಾಂತ್‌ ಅವರೊಂದಿಗೆ ಚಿತ್ರದ ಮುಖ್ಯ ಆಕರ್ಷಣೆಯಾಗಿ ನಾನಾ ಪಟೇಕರ್‌, ಮಮ್ಮೂಟ್ಟಿ ನಟಿಸಿದ್ದಾರೆ. ಜತೆಗೆ ಹುಮಾ ಕುರೇಶಿ,ಅಂಜಲಿ ಪಾಟೀಲ್‌, ಸಮುತಿರಕಣಿ, ಸುಕನ್ಯಾ,ಈಶ್ವರಿ ರಾವ್‌ ನಟಿಸಿದ್ದಾರೆ.

2016ರಲ್ಲಿ ಪಾ ರಂಜಿತ್‌ ನಿರ್ದೇಶನದ ಕಬಾಲಿ ಚಿತ್ರದಲ್ಲಿ ರಜನೀಕಾಂತ್‌ ಈ ಮೊದಲು ನಟಿಸಿದ್ದರು. ಆ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಭಾರೀ ಯಶಸ್ಸು ಕಂಡಿತ್ತು. ಇದೀಗ “ಕಾಲ’ ಚಿತ್ರವು ಮೃತ್ಯುವಿನ ಅಧಿದೇವತೆಯಾಗಿ ಯಮನನ್ನು ಉಲ್ಲೇಖೀಸುತ್ತದೆ. ಕಾಲ ಚಿತ್ರ 2018ರ ಏಪ್ರಿಲ್‌ 27ರಂದು ಬಿಡುಗಡೆಯಾಗಲಿದೆ. ‘ಕಾಲಾ’ ಚಿತ್ರದಲ್ಲಿ ಫುಲ್ ಬ್ಲ್ಯಾಕ್‌ ಗೆಟಪ್‌ನಲ್ಲಿ ರಜನಿ ಮಿಂಚಿದ್ದಾರೆ. ಕಾಲಾ ಟೀಸರ್‌ಗೆ ಭಾರಿ ಪ್ರತಿಕ್ರಿಯೆ ಸಿಕ್ಕಿದ್ದು ಕಬಾಲಿಯಂತೆ ‘ಕಾಲಾ’ ಮೋಡಿ ಮಾಡಲಿದೆಯೇ ಕಾದುನೋಡಬೇಕಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ