ರಾಜ್ಯಕ್ಕೆ ಹೆಚ್ಚು ಬಂಡವಾಳ ಆಕರ್ಷಿಸಲು ಸಚಿವ ಆರ್.ವಿ.ದೇಶಪಾಂಡೆ ನೇತೃತ್ವ ನಿಯೊಗದಿಂದ ಜಪಾನ್ ಮತ್ತು ದಕ್ಷಿಣಕೊರಿಯಾಕ್ಕೆ ಭೇಟಿ

ರಾಜ್ಯಕ್ಕೆ ಹೆಚ್ಚು ಬಂಡವಾಳ ಆಕರ್ಷಿಸಲು ಸಚಿವ ಆರ್.ವಿ.ದೇಶಪಾಂಡೆ ನೇತೃತ್ವ ನಿಯೊಗದಿಂದ ಜಪಾನ್ ಮತ್ತು ದಕ್ಷಿಣಕೊರಿಯಾಕ್ಕೆ ಭೇಟಿ
ಬೆಂಗಳೂರು, ಮಾ.3- ರಾಜ್ಯಕ್ಕೆ ಹೆಚ್ಚು ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ.ದೇಶಪಾಂq ನೇತೃತ್ವದಲ್ಲಿ ಉನ್ನತ ಮಟ್ಟದ ನಿಯೋಗವು ಮಾರ್ಚ್5ರಂದು ಜಪಾನ್ ಮತ್ತು ದಕ್ಷಿಣಕೊರಿಯಾಕ್ಕೆ ಭೇಟಿ ನೀಡಲಿದೆ.
ಮೊದಲಿಗೆ ಜಪಾನ್‍ಗೆ ಭೇಟಿ ನೀಡಲಿರುವ ನಿಯೋಗ ಅಲ್ಲಿನ ಮಿಫ್ರೆಚರ್ ಪ್ರಾಂತೀಯ ಸರಕಾರದೊಂದಿಗೆ ಕರ್ನಾಟಕ ರಾಜ್ಯವು ಈಗಾಗಲೇ ಹೊಂದಿರುವ ಪರಸ್ಪರ ತಿಳಿವಳಿಕೆ ಒಪ್ಪಂದವನ್ನು ನವೀಕರಿಸಿಕೊಳ್ಳಲಿದೆ. ಅಲ್ಲದೆ, ಕರ್ನಾಟಕಕ್ಕೆ ಬಂದು ಹೆಚ್ಚಿನ ಬಂಡವಾಳ ಹೂಡುವಂತೆ ಅಲ್ಲಿನ ಉದ್ಯಮರಂಗದ ಧುರೀಣ ರೊಂದಿಗೆ ನಿಯೋಗವು ಮಾತುಕತೆ ನಡೆಸಲಿದೆ.
ದಕ್ಷಿಣಕೊರಿಯಾದಲ್ಲಿ ಕೂಡ ನಿಯೋಗ ರಾಜ್ಯಕ್ಕೆ ಹೂಡಿಕೆಯನ್ನು ಸೆಳೆಯುವ ಉದ್ದೇಶದಿಂದ ಹಲವು ಉದ್ಯಮ ಸಂಸ್ಥೆಗಳೊಂದಿಗೆ ರಾಜ್ಯದ ಬಂಡವಾಳ ಸ್ನೇಹಿ ನೀತಿ ಕುರಿತು ಸಂವಾದ ನಡೆಸಲಿದೆ.
ಎರಡೂದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ರಾಜ್ಯದ ನಿಯೋಗವು ವಿಚಾರ ವಿನಿಮಯ ನಡೆಸಲಿದ್ದು, ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಇರುವ ವಿಪುಲ ಅವಕಾಶಗಳನ್ನು ಕುರಿತು ಮನವರಿಕೆ ಮಾಡಿಕೊಡಲಿದೆ ಎಂದು ಸಚಿವದೇಶಪಾಂಡೆ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ