ಪಾವಗಡ:ಮಾ-2: ಮಹಿಳೆಯರನ್ನು ಹೊತ್ತೊಯ್ದು ಅತ್ಯಾಚರ ನಡೆಸಿ ವಾರದ ಬಳಿಕ ಕರೆತಂದು ಬಿಡುತ್ತಿರುವ ಹೀನ ಕೃತ್ಯ ಪಾವಗಡದಲ್ಲಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಈ ಕುರಿತು ಕಿರಾತಕರಿಂದ ತಪ್ಪಿಸಿಕೊಂಡು ಬಚಾವ್ ಆಗಿರುವ ಅಂಗನವಾಡಿಕಾರ್ಯಕರ್ತೆಯೊಬ್ಬರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಬಗ್ಗೆ ಸ್ವತ: ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ತಿಳಿಸಿದ್ದು, ಪಾವಗಡದಲ್ಲಿನ ದೌರ್ಜನ್ಯದ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಸೂಚನೆ ನೀಡಿದ್ದಾರೆ.
ಕಳೆದ ಹಲವು ವರ್ಷಗಳಿಂದ ಈ ರೀತಿಯ ದೌರ್ಜನ್ಯ ನಡೆಯುತ್ತಿದ್ದು, ವಿಧವೆಯರು, ವಿವಾಹಿತರು ಸೇರಿದಂತೆ ಒಂಟಿಯಾಗಿ ಸಿಗುವ ಮಹಿಳೆಯರೇ ದುಷ್ಕರ್ಮಿಗಳ ಟಾರ್ಗೆಟ್. ಕೈಗೆ ಸಿಕ್ಕ ಮಹಿಳೆಯರನ್ನು ಹೊತ್ತೊಯ್ದು, ಅತ್ಯಾಚಾರ ಎಸಗಿ ವಾರದ ಬಳಿಕ ಕರೆ ತಂದು ಬಿಡುತ್ತಿದ್ದಾರಂತೆ ಎಂದು ನಾಗಲಕ್ಷ್ಮಿ ಬಾಯಿ ತಿಳಿಸಿದ್ದಾರೆ.
ಫೆ.28 ರಂದು ಸ್ಥಳಕ್ಕೆ ಭೇಟಿ ನೀಡಿದ್ದನಾಗ ಲಕ್ಷ್ಮಿ ಬಾಯಿ ಎದುರು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. ಕೆಲದಿನಗಳ ಹಿಂದೆ ಅಂಗನವಾಡಿ ಕಾರ್ಯಕರ್ತೆಯೊಬ್ಬರನ್ನು ಕಿರಾತಕರು ಅಪಹರಿಸಲು ಯತ್ನಿಸಿದ್ದು, ತಪ್ಪಿಸಿಕೊಂಡು ಬಂದ ಆಕೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಅಂಗನವಾಡಿ ಟೀಚರ್ ಪಾತ್ರೆ ತೊಳೆಯುವಾಗ ಗಂಡನ ಎದುರೇ ಎಳೆದಾಡಿದ ಕಿರಾತಕರು ನಡುಸ್ತೆಯಲ್ಲೆ ರೇಪ್ ಮಾಡುವ ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ. ಇಂತಹ ಐದು ಪ್ರಕರಣಗಳು ಸದ್ಯಕ್ಕೆ ಬೆಳಕಿಗೆ ಬಂದಿವೆ. ರಾಮಕೃಷ್ಣ, ಸುನಿಲ್, ದೇವರಾಜ್, ಮತ್ತು ಶಾರದ ಎಂಬವರಿಂದ ಈ ಕೃತ್ಯ ನಡೆಯುತ್ತಿದೆ ಎಂದು ನಾಗಲಕ್ಷ್ಮಿ ಬಾಯಿ ಹೇಳಿದ್ದಾರೆ.
ಶೋಚನೀಯ ವಿಚಾರವೆಂದರೆ ದುಷ್ಕರ್ಮಿಗಳ ಈ ಕೃತ್ಯದ ಬಗ್ಗೆ ದೂರು ನೀಡಿದರೂ ಪೊಲೀಸರು ಸಹ ದೂರು ದಾಖಲಿಸಿಕೊಳ್ಳುತ್ತಿಲ್ಲ. ಪ್ರತಿನಿತ್ಯ ಊರಿನಲ್ಲಿ ಹೆಣ್ಣುಮಕ್ಕಳು ಭಯಭೀತಿಯಿಂದ ಕಾಲಕಳೆಯುತ್ತಿದ್ದಾರೆ ಎಂದು ನಾಗಲಕ್ಷ್ಮಿ ತಿಳಿಸಿದ್ದಾರೆ.
women kidnap,rape,pavagada,