ಬೆಂಗಳೂರು, ಮಾ.2- ಅತಿ ವೇಗವಾಗಿ ಮುನ್ನುಗ್ಗಿದ ಕೆಎಸ್‍ಆರ್‍ಟಿಸಿ ಬಸ್ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ಹಲಸೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಉಡುಪಿಯ ಸಯ್ಯದ್ ನಯೀಂ (30) ಮೃತಪಟ್ಟ ದುರ್ದೈವಿ.
ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು ಇಂದಿರಾನಗರದಲ್ಲಿ ವಾಸವಾಗಿದ್ದರು.
ರಾತ್ರಿ 10.15ರಲ್ಲಿ ಸ್ನೇಹಿತ ಚಿನ್ಮಯ್ (28) ಎಂಬಾತನೊಂದಿಗೆ ಸಯ್ಯದ್ ನಯೀಂ ಬೈಕ್‍ನಲ್ಲಿ ಹೋಗುತ್ತಿದ್ದಾಗ ಹಳೆ ಮದ್ರಾಸ್ ರಸ್ತೆ ಕಲ್ಪಲ್ಲಿ ಜಂಕ್ಷನ್-ವಿವೇಕಾನಂದ ಮೆಟ್ರೋ ಬಳಿ ಅತಿ ವೇಗವಾಗಿ ಮುನ್ನುಗ್ಗಿದ ಕೆಎಸ್‍ಆರ್‍ಟಿಸಿ ಬಸ್ ಇವರ ಬೈಕ್‍ಗೆ ಡಿಕ್ಕಿ ಹೊಡೆದಿದೆ.
ಪರಿಣಾಮವಾಗಿ ಸವಾರರಿಬ್ಬರು ಕೆಳಗೆ ಬಿದ್ದಿದ್ದು, ಹಿಂಬದಿ ಸವಾರ ಸಯ್ಯದ್ ನಯೀಂ ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶವವನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
ಸವಾರ ಚಿನ್ಮಯ್‍ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಘಟನೆ ಸಂಬಂಧ ಹಲಸೂರು ಠಾಣೆ ಪೆÇಲೀಸರು ಬಸ್ ಚಾಲಕನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.