ಬೆಂಗಳೂರು, ಮಾ.2-ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ 2018-19ನೇ ಸಾಲಿನಲ್ಲಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಶೇ.25ರಷ್ಟು ಮಕ್ಕಳ ದಾಖಲಾತಿ ಪ್ರಕ್ರಿಯೆ ನಾಳೆಯಿಂದ (ಮಾ.3) ಅರಂಭವಾಗುತ್ತಿದ್ದು, ಅರ್ಹ ಪೆÇೀಷಕರು ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಆರ್‍ಟಿಇ ಸ್ಟೂಡೆಂಟ್ಸ್ ಅಂಡ್ ಪೇರೆಂಟ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಬಿ.ಎನ್.ಯೋಗಾನಂದ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಈ ಸೌಲಭ್ಯವನ್ನು ಒದಗಿಸಲು 35 ಉಚಿತ ಆರ್‍ಟಿಇ ಆನ್‍ಲೈನ್ ಕೇಂದ್ರಗಳನ್ನು ತೆರೆಯಲಾಗಿದ್ದು, ಇದೇ ಮೊದಲ ಬಾರಿಗೆ ರಾಜ್ಯದ ಬೆಂಗಳೂರು ನಗರ ಮತ್ತು ಮಂಡ್ಯ ಜಿಲ್ಲೆಯಲ್ಲಿ ಉಚಿತ ಅರ್ಜಿ ಸಲ್ಲಿಕೆ ಕೇಂದ್ರವನ್ನು ಆರಂಭಿಸಲಾಗಿದೆ.
2013 ಆಗಸ್ಟ್ 1 ರಿಂದ 2014 ಆಗಸ್ಟ್ 1 ರೊಳಗೆ ಜನಿಸಿರುವ ಮಕ್ಕಳಿಗೆ ಎಲ್‍ಕೆಜಿಗೆ ಪ್ರವೇಶ ಅವಕಾಶ ಹಾಗೂ 2011 ಆಗಸ್ಟ್ 1ರಿಂದ 2012 ಆಗಸ್ಟ್ 1ರೊಳಗೆ ಜನಿಸಿರುವ ಮಕ್ಕಳಿಗೆ ಒಂದನೇ ತರಗತಿಗೆ ಅವಕಾಶ ಕಲ್ಪಿಸಲಾಗುವುದು.
ಇಂತಹ ಮಕ್ಕಳ ಪೆÇೀಷಕರು ಹೆಚ್ಚಿನ ಮಾಹಿತಿ ಪಡೆಯಲು ಅನುವಾಗುವಂತೆ ಉಚಿತ ಸಹಾಯವಾಣಿವನ್ನು ಆರಂಭಿಸಲಾಗಿದ್ದು, ಇದರೊಂದಿಗೆ ಇಂಡಸ್ ಆ್ಯಕ್ಷನ್ ಸಹಯೋಗಿ ಸಂಸ್ಥೆಯ ಸಹಾಯವಾಣಿಯೂ ನೆರವಾಗಲಿದೆ. ಅರ್ಜಿ ಸಲ್ಲಿಸಲು ಮಗುವಿನ ಸೂಕ್ತ ದಾಖಲಾತಿಗಳು ಸಲ್ಲಿಸುವ ಅಗತ್ಯವಿದ್ದು, ಅದರಲ್ಲಿ ಪ್ರಮುಖವಾಗಿ ಮಗು ಹಾಗೂ ತಂದೆ-ತಾಯಿ ಆಧಾರ್‍ಕಾರ್ಡ್, ಪೆÇೀಷಕ ಅಥವಾ ಮಗುವಿನ ಜಾತಿ, ಆದಾಯ ಪ್ರಮಾಣಪತ್ರ, ಮಗು ಮತ್ತು ಪೆÇೀಷಕರ ಆಧಾರ್ ಕಾರ್ಡ್‍ನಲ್ಲಿ ನಮೂದಿಸಿರುವಂತಹ ಮೊಬೈಲ್ ಸಂಖ್ಯೆ ನೀಡುವುದು ಕಡ್ಡಾಯವಾಗಿದೆ.
ಆನ್‍ಲೈನ್ ಕೇಂದ್ರಗಳ ದೂರವಾಣಿ ವಿವರ:
ಯಲಹಂಕ ಹೋಬಳಿ ಸಿಂಗನಾಯಕನಹಳ್ಳಿ -9663491093
ಯಲಹಂಕ ನ್ಯೂಟೌನ್ -9686504523
ಬ್ಯಾಟರಾಯನಪುರದ ರಾಮಕೃಷ್ಣಹೆಗಡೆ ನಗರ-9108993523
ಕೆಂಗೇರಿ ಔಟರ್‍ರಿಂಗ್ ರೋಡ್, ನಾಗರಬಾವಿ 2ನೆ ಹಂತ- 9113593872
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹಾವನೂರು ಬಡಾವಣೆ, ಹೆಸರಘಟ್ಟ ಮುಖ್ಯರಸ್ತೆ-9980225125
ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ವಿಜಿನಾಪುರ-9986537786
ಪುಲಕೇಶಿನಗರ ವಿಧಾನಸಭಾ ಕ್ಷೇತ್ರ ಕಾವಲ್‍ಭೆರಸಂದ್ರ ಮುಖ್ಯರಸ್ತೆ-9886515010
ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರ ಸುದ್ದುಗುಂಟೆಪಾಳ್ಯ-9916216221
ಶಿವಾಜಿನಗರ ವಿಧಾನಸಭಾ ಕ್ಷೇತ್ರ ಮಾರಪ್ಪ ಗಾರ್ಡನ್-8792139901
ಗಾಂಧಿನಗರ ವಿಧಾನಸಭಾ ಕ್ಷೇತ್ರ ಬಿನ್ನಿಮಿಲ್ ರಸ್ತೆ-9980558882
ಗಾಂಧಿನಗರ ಮತ್ತು ರಾಜಾಜಿನಗರ ವಿಧಾನಸಭಾ ಕ್ಷೇತ್ರ ಶ್ರೀರಾಮಪುರ ಪೆÇಲೀಸ್ ಠಾಣೆ ಬಳಿ -9620170771
ಶಾಂತಿನಗರ ವಿಧಾನಸಭಾ ಕ್ಷೇತ್ರ ಬಿಬಿಎಂಪಿ ಮೆಟರ್ನಿಟಿ ಆಸ್ಪತ್ರೆ-7259753543
ರಾಜಾಜಿನಗರ ವಿಧಾನಸಭಾ ಕ್ಷೇತ್ರ 12ನೆ ಮುಖ್ಯರಸ್ತೆ ರಾಜಾಜಿನಗರ-9964107995
ಬಿಟಿಎಂ ಬಡಾವಣೆ ವಿಧಾನಸಭಾ ಕ್ಷೇತ್ರ ಎಚ್.ಎಸ್.ಆರ್. ಲೇಔಟ್ 5ನೇ ಸೆಕ್ಟರ್-8880044989
ಮಹದೇವಪುರ ವಿಧಾನಸಭಾ ಕ್ಷೇತ್ರ ಕುಂದಲಹಳ್ಳಿ ಎಇಸಿಎಸ್ ಲೇಔಟ್-080-41231188
ವಿಜಯನಗರ ವಿಧಾನಸಭಾ ಕ್ಷೇತ್ರ, ಹಂಪಿನಗರ, ಸಂಕಷ್ಟಹರ ಗಣಪತಿ ದೇವಸ್ಥಾನ ಸಮೀಪ -9060088675
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಈದ್ಗಾ ಮೈದಾನದ ಹತ್ತಿರ-9632548808
ಶಾಂತಿನಗರ ವಿಲ್ಸನ್‍ಗಾರ್ಡನ್ ಪೆÇಲೀಸ್ ಸ್ಟೇಷನ್ ಎದುರು-9844399380
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ರಾಜಾಜಿನಗರ 6ನೇ ಹಂತ-080-23399106
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ, ಜಯನಗರ 1ನೇ ಬ್ಲಾಕ್,-9916497142
ಶಿವಮೊಗ್ಗ ಜಿಲ್ಲೆ, ಚೈತನ್ಯ ಆಸ್ಪತ್ರೆ ಹತ್ತಿರ-9945999015
ಈ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಕೆ ಸೇರಿದಂತೆ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದ್ದು, ಆರ್‍ಟಿಇ ಸ್ಟೂಡೆಂಟ್ಸ್ ಅಂಡ್ ಪೇರೆಂಟ್ಸ್ ಅಸೋಸಿಯೇಷನ್‍ನ ದೂ.ಸಂ.080-41634104/8884676944 ಸಂಪರ್ಕಿಸಬಹುದು. ಈ ಎಲ್ಲಾ ಆನ್‍ಲೈನ್ ಕೇಂದ್ರಗಳು ಪ್ರತಿದಿನ 10 ರಿಂದ 4.30ರವರೆಗೂ ಕಾರ್ಯನಿರ್ವಹಿಸಲಿದ್ದು, ರಾಜ್ಯಮಟ್ಟದ ಸಹಾಯವಾಣಿ 7022422495 ಮತ್ತು ಇಂಡಸ್ ಆ್ಯಕ್ಷನ್ ಸಹಾಯವಾಣಿ 080-30474949ನ್ನು ಬೆಳಿಗ್ಗೆ 10 ರಿಂದ 6ರವರೆಗೆ ಸಂಪರ್ಕಿಸಬಹುದು.