ಮೈಸೂರು, ಮಾ.2- ಮೈಸೂರು-ಬೆಂಗಳೂರು-ಹುಬ್ಬಳ್ಳಿ ರೈಲ್ವೆ ನಿಲ್ದಾಣಗಳಲ್ಲಿ ಇಂದಿನಿಂದ ಕನ್ನಡದಲ್ಲಿ ರೈಲ್ವೆ ಟಿಕೆಟ್ ವಿತರಿಸಲಾಗಿದೆ.
ಈವರೆಗೂ ಇಂಗ್ಲಿಷ್ನಲ್ಲಿ ಮಾತ್ರ ಎಲ್ಲಿಂದ ಎಲ್ಲಿಯವರೆಗೆ ಎಂಬುದು ಮುದ್ರಣವಾಗುತ್ತಿತ್ತು. ಹಲವರು ಕನ್ನಡ ಭಾಷೆಯಲ್ಲಿ ಟಿಕೆಟ್ ಮುದ್ರಿಸುವಂತೆ ಒತ್ತಾಯಿಸಿದ್ದರ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಕ್ರಮಕೈಗೊಂಡು ನಿನ್ನೆ ಪ್ರಾಯೋಗಿಕವಾಗಿ ಕನ್ನಡ ಭಾಷೆಯನ್ನು ಟಿಕೆಟ್ಗಳಲ್ಲಿ ಬಳಸಿದೆ.
ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಇಂದು ಮೈಸೂರು-ಬೆಂಗಳೂರು ಹಾಗೂ ಹುಬ್ಬಳ್ಳಿ ರೈಲ್ವೆ ನಿಲ್ದಾಣಗಳಲ್ಲಿ ಟಿಕೆಟ್ ಪಡೆಯುವವರಿಗೆ ಎಲ್ಲಿಂದ ಎಲ್ಲಿಯವರೆಗೆ ಎಂಬ ಮಾಹಿತಿ ಇಂದಿನಿಂದ ಕನ್ನಡದಲ್ಲಿ ಸಿಗಲಿದೆ.
ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಕನ್ನಡ ಭಾಷೆಯಲ್ಲಿ ಟಿಕೆಟ್ ಮುದ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ನೈರುತ್ಯ ರೈಲ್ವೆತಿಳಿಸಿದೆ.