ನಮ್ಮ ಹೋರಾಟ ಭಯೋತ್ಪಾದನೆ ವಿರುದ್ಧವೇ ಹೊರತು ಇಸ್ಲಾಂ ವಿರುದ್ಧವಲ್ಲ: ಜೋರ್ಡನ್‌ ದೊರೆ ಅಬ್ದುಲ್ಲಾ -II ಹೇಳಿಕೆ

ನವದೆಹಲಿ:ಮಾ-1: ನಮ್ಮ ಹೋರಾಟ ಜಾಗತಿಕ ಸಮಸ್ಯೆಯಾದ ಭಯೋತ್ಪಾದನೆ ವಿರುದ್ಧವೇ ಹೊರತು ಇಸ್ಲಾಂ ವಿರುದ್ಧವಲ್ಲ ಎಂದು ಜೋರ್ಡನ್‌ ದೊರೆ ಅಬ್ದುಲ್ಲಾ -II ಹೇಳಿದ್ದಾರೆ.

 

ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ಜೋರ್ಡನ್ ದೊರೆ ಅಬ್ದುಲ್ಲಾ ಮಾತುಕತೆ ನಡೆಸಿದರು. ಈ ವೇಳೆ ನಮ್ಮ ಹೋರಾಟ ಇಸ್ಲಾಂ ವಿರುದ್ದ ಆಗಿರುವುದು ಬೇಡ, ಬದಲಾಗಿ ಉಗ್ರವಾದದ ವಿರುದ್ಧ ಇರಲಿ. ನನ್ನ ಮಕ್ಕಳಿಗೆ ಹಾಗೂ ಮುಂದಿನ ತಲೆಮಾರಿಗೆ 1.8 ಬಿಲಿಯನ್‌ ಮುಸಲ್ಮಾನರ ನಂಬಿಕೆ ಕುರಿತು ಹೇಳಿಕೊಡಲು ಇಚ್ಛಿಸುತ್ತೇನೆ. ಹೀಗಾಗಿ ನಾವು ಯಾವುದೇ ಧರ್ಮವನ್ನು ಗುರಿಯಾಗಿಸಿಕೊಂಡು ಹೋರಾಟ ಮಾಡುವುದು ಬೇಡ ಎಂದು ಹೇಳಿದರು.

 

ಜಾಗತಿಕ ಮಟ್ಟದಲ್ಲಿ ಮುಸ್ಲಿಮರನ್ನು ಬಲಿಪಶುಗಳನ್ನಾಗಿ ಮಾಡುವ ದುಷ್ಟ ಶಕ್ತಿಗಳನ್ನು ಕಾಣುತ್ತಿದ್ದೇವೆ. ಅಲ್ಲದೇ ಹಲವಾರು ಸಂದರ್ಭದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಟಗಳು ಮುಸ್ಲಿಮರ ವಿರುದ್ಧ ನಡೆಯುತ್ತಿದೆ. ಇಂತ ದುಷ್ಟ ಶಕ್ತಿಗಳನ್ನು ದಮನ ಮಾಡಲು ಪಣತೊಡಬೇಕಾದ ಅಗತ್ಯವಿದೆ ಎಂದರು.

 

ವಿಶ್ವದಲ್ಲಿ ಶಾಂತಿ ನೆಲೆಸಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಶಾಂತಿಗೆ ಭಂಗ ತರುವ ಶಕ್ತಿಗಳ ವಿರುದ್ಧ ಹೋರಾಡೋಣ ಎಂದು ಕರೆ ನೀಡಿದರು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ