ಬಳ್ಳಾರಿ,ಮಾ.2- ಹುಚ್ಚು ನಾಯಿಗಳ ದಾಳಿಗೆ ಮಗು ಹಾಗೂ ಓರ್ವ ಮಹಿಳೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಸಿರಿಗೇರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಒಂದೇ ದಿನದಲ್ಲಿ ಇಬ್ಬರು ಮಕ್ಕಳಿಗೆ ಹುಚ್ಚು ನಾಯಿ ಕಡಿದಿದ್ದು , ಕವಿತಾ(5) ಮತ್ತು ದೇವಿಕಮ್ಮ ಎಂಬ ಮಹಿಳೆಗೆ ನಾಯಿ ಕಚ್ಚಿರುವ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿರಗುಪ್ಪ ತಾಲ್ಲೂಕಿನ ಕೂಳೂರು ಗ್ರಾಮದಲ್ಲಿನ ಈ ಇಬ್ಬರಿಗೂ ನಾಯಿ ಕಚ್ಚಿದೆ. ಈ ಹಿಂದೆಯೂ ಇದೇ ಗ್ರಾಮದಲ್ಲಿ ಎರಡುಮೂರು ಬಾರಿ ಹುಚ್ಚು ನಾಯಿ ದಾಳಿ ನಡೆಸಿತ್ತು.
ಇದೀಗ ಮತ್ತೆ ಹುಚ್ಚು ನಾಯಿ ಆರ್ಭಟ ಹೆಚ್ಚಾಗಿರುವುದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.