ಹಾಸನ, ಮಾ.2- ಜಿಲ್ಲೆಯ ಹೊಳೆನರಸೀಪುರದಲ್ಲಿ ಇಂದು ನಡೆಯುತ್ತಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವದ ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಅವರ ಪತ್ನಿ ಚೆನ್ನಮ್ಮ ದೇವೇಗೌಡರು ನೂಕುನುಗ್ಗಲಿನಲ್ಲಿ ಸಿಲುಕಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಈ ವೇಳೆ ಭದ್ರತಾ ಸಿಬ್ಬಂದಿ ದೇವೇಗೌಡ ದಂಪತಿಯನ್ನು ಜನರಿಂದ ರಕ್ಷಿಸಿ ಬೇರೆಡೆಗೆ ಕರೆದೊಯ್ದರು.
ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಳ್ಳಲು ದೇವೇಗೌಡರು ಪತ್ನಿ ಸಮೇತ ಆಗಮಿಸಿದ್ದರು. ರಥ ಹೊರಟ ಕೂಡಲೇ ಜನ ಒಮ್ಮೆಲೆ ರಥದ ಕಡೆ ಮುಗಿ ಬಿದುದ್ದರಿಂದ ಗೌಡರು ಜನಜಂಗುಳಿಯಲ್ಲಿ ಸಿಲುಕಿಕೊಂಡರು.
ಹೊರ ಬರಲಾಗದೆ ಕೆಲ ಕಾಲ ಪರದಾಡಬೇಕಾಯಿತು. ತಕ್ಷಣ ಭದ್ರತಾ ಸಿಬ್ಬಂದಿ ಅವರನ್ನು ಹೊರ ಕರೆದೊಯ್ದರು.