ತುಮಕೂರು, ಮಾ.2- ಆಂಧ್ರ ಗಡಿ ಭಾಗದಲ್ಲಿರುವ ಪಾವಗಡದ ಗ್ರಾಮವೊಂದರಲ್ಲಿ ದುಷ್ಕರ್ಮಿಗಳು ಹೆಣ್ಣು ಮಕ್ಕಳನ್ನು ಅಪಹರಿಸಿ ಅತ್ಯಾಚಾರವೆಸಗಿ ತದನಂತರ ಪ್ರಾಣಬೆದರಿಕೆ ಹಾಕಿ ಗ್ರಾಮಕ್ಕೆ ಬಿಟ್ಟು ಹೋಗುತ್ತಿರುವ ಘಟನೆಯಿಂದ ಸ್ಥಳೀಯ ಜನತೆ ಬೆಚ್ಚಿಬಿದ್ದಿದ್ದಾರೆ.
ಪಾವಗಡದ ಅರಸೀಕೆರೆ ಪೆÇಲೀಸ್ ಠಾಣೆ ವ್ಯಾಪ್ತಿ ಹಾಗೂ ನಿಡಗಲ್ ಗ್ರಾಮದಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿವೆ ಎಂಬ ಮಾತುಗಳು ಕೇಳಿಬಂದಿವೆ.
ಇಲ್ಲಿನ ಹೆಣ್ಣು ಮಕ್ಕಳ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಮನೆಯಲ್ಲಿ ಹೆಣ್ಣು ಮಕ್ಕಳು ಒಂಟಿಯಾಗಿ ಇರುವುದೇ ದುಸ್ತರವಾಗಿದೆ.
ಪ್ರೌಢಾವಸ್ಥೆಗೆ ಬರುವ ಹೆಣ್ಣು ಮಕ್ಕಳನ್ನು ಗುರುತಿಸಿ ಅವರನ್ನು ಅಪಹರಿಸಿ ಅತ್ಯಾಚಾರವೆಸಗಿ ಒಂದು ವಾರ ಕಾಲ ತಮ್ಮ ಬಳಿಯಲ್ಲೇ ಇಟ್ಟುಕೊಳ್ಳುವ ದುಷ್ಕರ್ಮಿಗಳು ತದನಂತರ ಈ ವಿಷಯವನ್ನು ಯಾರಿಗಾದರೂ ಹೇಳಿದಲ್ಲಿ ಅಥವಾ ದೂರು ನೀಡಿದಲ್ಲಿ ನಿಮ್ಮ ಕುಟುಂಬದವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂಬ ವರದಿ ಲಭ್ಯವಾಗಿದೆ.
ದುಷ್ಕರ್ಮಿಗಳ ಬೆದರಿಕೆಯಿಂದ ಹೆದರಿರುವ ಹತ್ತಾರು ಹೆಣ್ಣು ಮಕ್ಕಳ ಪೆÇೀಷಕರು ಏನೂ ಮಡದಂತಹ ಸ್ಥಿತಿಯಲ್ಲಿ ಬದುಕುತ್ತಿರುವುದು ಶೋಚನೀಯವಾಗಿದೆ.
ಜಿಲ್ಲಾಧಿಕಾರಿಗಳು, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳು, ಗೃಹ ಇಲಾಖೆ ಈ ಬಗ್ಗೆ ತನಿಖೆ ನಡೆಸಿ ಪಾವಗಡ ಸುತ್ತಮುತ್ತಲಿನ ಹೆಣ್ಣು ಮಕ್ಕಳನ್ನು ರಕ್ಷಿಸಬೇಕೆಂಬುದೇ ಸ್ಥಳೀಯರ ಅಳಲಾಗಿದೆ.