![<> on July 9, 2011 in Sun Valley, Idaho.](http://kannada.vartamitra.com/wp-content/uploads/2018/03/ananda-krishnan-678x381.jpg)
ಮುಂಬೈ, ಮಾ.2- ಟಿ.ಆನಂದಕೃಷ್ಣನ್ ಮಲೇಷ್ಯಾದ ಖ್ಯಾತ ಉದ್ಯಮಿ. ಅನೇಕ ಉದ್ಯಮಗಳ ನಿರ್ವಹಣೆಯಲ್ಲಿ ಇವರದು ಪಳಗಿದ ಕೈ. ಭಾರತದಲ್ಲಿ ತಮ್ಮ ಅದೃಷ್ಟ ಮತ್ತಷ್ಟು ಖುಲಾಯಿಸಬಹುದೆಂಬ ನಿರೀಕ್ಷೆಯೊಂದಿಗೆ ಏರ್ಸೆಲ್ ಕಮ್ಯುನಿಕೇಷನ್ ಸಂಸ್ಥೆ ಮೇಲೆ ಭಾರೀ ಬಂಡವಾಳ ಹೂಡಿದ್ದಕ್ಕಾಗಿ ಇವರು ಈಗ ಪಶ್ಚಾತ್ತಾಪ ಪಡುವಂತಾಗಿದೆ.
ಏರ್ಸೆಲ್ ದಿವಾಳಿಯಾಗಿದ್ದು, ಮಲೇಷ್ಯಾ ಉದ್ಯಮಿ 7 ಶತಕೋಟಿ ಡಾಲರ್ (ಸುಮಾರು 4562 ಕೋಟಿ ರೂ.) ಕಳೆದುಕೊಂಡ ಕಂಗಾಲಾಗಿದ್ದಾರೆ.
ಏರ್ಸೆಲ್ ಈಗಾಗಲೇ 16 ಸಾವಿರ ಕೋಟಿ ನಷ್ಟ ಅನುಭವಿಸಿದ್ದು, ದಿವಾಳಿತನ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.